ಪಿಎಂ ಕೇರ್ ನಿಧಿ ಸಂಗ್ರಹ ಮಹಾ ಸಂಪರ್ಕ ಅಭಿಯಾನ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತ ಕ್ಷೇತ್ರ ಪಿಎಂ ಕೇರ್ ನಿಧಿ ಸಂಗ್ರಹ ಮಹಾ ಸಂಪರ್ಕ ಅಭಿಯಾನನ್ನು ಬಾಗಲಕೋಟೆಯ ನಗರಸಭೆ ಸದಸ್ಯರಾದ ಶ್ರೀಮತಿ ನಾಗರತ್ನ ಬಸವರಾಜ ಹೆಬ್ಬಳ್ಳಿ ವಾರ್ಡ್ ನಂಬರ್ 20 ರಲ್ಲಿ ಚಾಲನೆ ನೀಡಿದರು.

ಕೊರೊನಾ ಮಹಾಮಾರಿಗೆ ಇಡಿ ದೇಶವೆ ತಲ್ಲನಗೊಂಡಿದ್ದು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ಇವತ್ತು ಸಂಘಟಿತ,ಅಸಂಘಟಿತ ವಲಯಗಳಲ್ಲಿರುವ ಶ್ರಮಿಕ ವರ್ಗದವರಿಗೂ,ಎಲ್ಲ ಸಮುದಾಯದವರಿಗೂ ಮೇಲಿಂದ ಮೇಲೆ ಉತ್ತಮ ಆರ್ಥಿಕ ಪ್ಯಾಕೇಜ್ ನೀಡುತ್ತಿದ್ದಾರೆ. ಸಹಾಯ ಹಸ್ತ ವಾಗಿ ನಾವು ನೀವೆಲ್ಲರು ಸೇರಿ ನಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನ ಈ ಪರಿಹಾರ ನಿಧಿಗೆ ನಿಡೋಣ. ಇದರಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತೆ” ಎಂದು ಮನವಿ ಮಾಡಿದ್ದಾರೆ.

ಅವರ ಜೊತೆ ಬಿಜೆಪಿ ಹಿರಿಯ ಮುಖಂಡರಾದ ಜಿ.ಎನ್.ಪಾಟೀಲ, ಭಾಗೀರಥಿ ಪಾಟೀಲ್, ಮಾಂತೇಶ ಬಾದೋಡಗಿ, ಸಿದ್ದು , ಅಬ್ಬುಲ್ ಕಟ್ಟಿ ,ವಾಯ್ .ಸಿ .ದೊಡಮನಿ, ವಿನೋದ ದೊಡಮನಿ ಹಾಗೂ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*