ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾಸ್ಕ ತಯಾರಿಸಿ ಮಾರುತ್ತಿರು ನಾಲತವಾಡ ಟೇಲರ್ ಸೈಯ್ಯದ

ವರದಿ:- ಕಾಶಿನಾಥ ಬಿರಾದಾರ ನಾಲತವಾಡ

ಜೀಲ್ಲಾ ಸುದ್ದಿಗಳು

ನಾಲತವಾಡ:ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದ್ದು,ಆದರೆ ಇಲ್ಲೂಬ್ಬ ಟೇಲರ್ ಕೊರೊನಾ ನಿಯಂತ್ರಿಸಲು ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

ಪಟ್ಟಣದ ಜಗದೇವನಗರದ ಸೈಯ್ಯದ ಢಕಣಿ ಎಂಬುವ ಟೇಲರ್ ನಿತ್ಯ ಮಾಸ್ಕ್ ಹೊಲಿದು,ಮಾರುಕಟ್ಟೆ ಧಾರಣಿಗಿಂತ ಅತೀವ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ.ಪತ್ನಿ,ಮಕ್ಕಳು ಸೇರಿದಂತೆ
ಕುಟುಂಬದ ಸದಸ್ಯರು ತಮ್ಮ ಮನೆಗೆಲಸ ಮುಗಿಸಿಕೊಂಡು ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದು, ಮಾಸ್ಕ್ ಹೊಲೆದು ಗ್ರಾಮೀಣ ಭಾಗದ ಜನರಿಗೆ ಕಡಿಮೆ ಬೆಲೆಗೆ ವಿತರಣೆ ಮಾಡುತ್ತಿದ್ದಾರೆ. ಬಟ್ಟೆ ಹೊಲಿಸಿಕೊಳ್ಳುವ ಗಿರಾಕಿಗಳು ಇಲ್ಲದ್ದರಿಂದ, ಬಿಡುವಿನ ವೇಳೆಯ ಸದುಪಯೋಗ ಮಾಡಿಕೊಳ್ಳುವ ಉದ್ದೇಶದಿಂದ ಮಾಸ್ಕ್ ಹೊಲೆಯುವ ಕಾರ್ಯ ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರಿಗೆ ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಅರ್ಧ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಹೊಲೆದು ಬಡ ಜನರಿಗೆ ನೀಡಿದ್ದಾರೆ.

ಪತ್ನಿಯು ಮನೆಗೆಲಸ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಕೆಲಸ ಮಾಡಿ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಗ್ರಾಮಗಳಲ್ಲಿರುವ ಬಡ ಜನರು ಮಾಸ್ಕ್ ಧರಿಸಿರುವುದಿಲ್ಲ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಜನರು ಗುಂಪು ಸೇರುವ ಪ್ರಸಂಗಗಳಾದ ಮದುವೆ,ಪುಟ್ಟ ಕಾರಣಗಳು,ಸಂಬಂಧಿಗಳು ನಿಧನರಾದಾಗ ದುಬಾರಿ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಅತೀವ ಕಡಿಮೆ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದೇವೆ. ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಸಯ್ಯದ ಢಕಣಿ ತಿಳಿಸಿದ್ದಾರೆ.

ಸಾಕಷ್ಟು ಸಂಘ ಸಂಸ್ಥೆಗಳು ಮಾಸ್ಕ್ ಬೇಕೆಂದು ಬೇಡಿಕೆ ಸಲ್ಲಿಸಿದ್ದು,ಅವರಿಗೂ ಕಡಿಮೆ ದರದಲ್ಲಿ ಕೊಡುವದಾಗಿ ಸಯ್ಯದ ತಿಳಿಸಿದರು.

Be the first to comment

Leave a Reply

Your email address will not be published.


*