ಸಾಹಿತ್ಯ
ಬೀದರ್.(ಅಂಬಿಗ ನ್ಯೂಸ್ )ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್ ವತಿಯಿಂದ ನಡೆಸುತ್ತಿರುವ 49ನೇ ಓದಿನ ಮನೆ ಕಾರ್ಯಕ್ರಮಕ್ಕೆ ಸಿನೆಮಾ ನಿರ್ದೇಶಕರಾದ ಬಿಜೆ ವಿಷ್ಣುಕಾಂತ ಸರ್ ಅವರು ಮೊದಲೇ ಫೋನ್ ಮಾಡಿ ಭವರಿ ಕಥೆಯನ್ನು ಸಿನೆಮಾ ಮಾಡುವ ಬಗ್ಗೆ ತಮ್ಮೊಂದಿಗೆ ಮಾತನಾಡುವುದಿದೆ . ಸಾಯಂಕಾಲ ಬರುತ್ತೇನೆ ಮೇಡಂ ಎಂದಿದ್ದರು. ಹೇಳಿದ ಸಮಯಕ್ಕೆ ಸರಿಯಾಗಿ ಐದು ಗಂಟೆಗೆ ಬಂದರು.ಮೊದಲು ನಮ್ಮ ಓದಿನ ಮನೆ ಕಾರ್ಯಕ್ರಮ ಮುಗಿಸಿ ಭವರಿಯ ಬಗ್ಗೆ ಚರ್ಚೆಗೆ ಕುಳಿತರಾಯಿತು ಎಂದುಕೊಂಡು ಓದಿನ ಮನೆ ಪ್ರಾರಂಭಿಸಿದೇವು.ಮೊದಲಿಗೆ ವಚನ ವಾಚನ ನಡೆಯಿತು ನಂತರ ಬಿ ಜೆ ವಿಷ್ಣುಕಾಂತ ಅವರು ಮಕ್ಕಳಿಗೆ ಕನ್ನಡ ಅಕ್ಷರ ಗಳನ್ನು ಹೇಗೆ ಉಚ್ಛರಿಸಬೇಕು? ಶ ಷ ಸ ಈ ಮೂರು ಅಕ್ಷರಗಳ ಉಚ್ಛಾರಣೆ ಹೇಗೆ ಮಾಡಬೇಕು ? ಎಂಬುದನ್ನು ಹೇಳಿಕೊಟ್ಟರು .ಅದಾದ ನಂತರ ಅನುಭವ ಮಂಟಪ, ಬಸವಣ್ಣನವರು, ಶರಣರ ನಡೆ ನುಡಿ, ಮುಂತಾದ ವಿಷಯಗಳ ಬಗ್ಗೆ ಹೇಳಿದರು. ಭವರಿ ಕಥೆಯನ್ನೇ ಹೇಳಿರಿ ಎಂದರು . ಅದನ್ನು ಸಂಕ್ಷಿಪ್ತವಾಗಿ ಹೇಳಿದೆ. ಬಾಲ್ಯದಿಂದಲೂ ಭವರಿಗೆ ಭರಮಣ್ಣನ ಜೊತೆ ಮದುವೆ ಎಂದು ಹಿರಿಯರು ಗೆಳತಿಯರು ಹಂಗಿಸಿ ಹಂಗಿಸಿ ,ಭವರಿ ತನ್ನ ಇನಿಯ ಭರಮನ ಬಗ್ಗೆ ಕನಸು ಕಾಣುವಂತೆ ಮಾಡುತ್ತಾರೆ. ಮುಂದೇನಾಯಿತು ಎಂಬುದನ್ನು ನೀವೆ ಓದಬೇಕು. ಭವರಿಯ ಜೀವನದ ಕಥೆಯನ್ನು ಮಕ್ಕಳು ಕುಳಿತು ಆಲಿಸಿದರು.
ನಂತರ ಮಕ್ಕಳಿಗೆ ಆಟ ಆಡಲು ಹೇಳಲಾಯಿತು.
ಭವರಿ ಕಥೆಯನ್ನು ಸಿನೆಮಾ ಮಾಡವುದಕ್ಕಾಗಿ ಸಂಪೂರ್ಣ. ಕಥೆಯ ವಿವರವನ್ನು ಮತ್ತು ಪಾತ್ರಗಳ ಪರಿಚಯವನ್ನು ಬಿಜೆ ವಿಷ್ಣುಕಾಂತ ಸರ್ ಅವರು ಬರೆದು ಕೊಂಡರು. ನಾನು ಕಥೆಯ ಒಂದೊಂದು ದೃಶ್ಯ ನನ್ನು ವಿವರಿಸಿ ಹೇಳಿದೆ . ಎಲ್ಲವನ್ನೂ ಬರೆದು ಕೊಂಡ ನಂತರ ಅವರು ಕಥೆ ತುಂಬಾ ಚನ್ನಾಗಿದೆ ಇಷ್ಟವಾಯ್ತು ಎಂದರು .ಅವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು.
ಬಾಂಧವರೇ ಮನೆಯಲ್ಲೇ ಇರಿ.
ಕರೋನಾ ಓಡಿಸಲು ಕೈ ಜೋಡಿಸಿ
Be the first to comment