ಜೀಲ್ಲಾ ಸುದ್ದಿಗಳು
ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ಕೈ ಗೊಂಡಿರುವ ಲಾಕ್ ಡೌನ್ ನ ಕಠಿಣ ನಿಯಮ ದಿಂದಾಗಿ ಇಡಿ ರಾಜ್ಯವೆ ತಲ್ಲಣಗೊಂಡಿದೆ.ಕೆಲವು ಜಿಲ್ಲೆ,ತಾಲೂಕು,ಹಾಗೂ ಗ್ರಾಮಗಳಲ್ಲಿ ನಿಯಮಗಳನ್ನು ಬೇಕಾಬಿಟ್ಟಿಯಾಗಿ ಪಾಲಿಸುತ್ತಿರುವುದನ್ನು ಕಾಣುತ್ತೇವೆ ಆದರೆ ಗುಡೂರ ಗ್ರಾಮವು ಈ ನಿಯಮ ಪಾಲಿಸುವುದರಲ್ಲಿ ನಂಬರ್ -01.
ಇಲಕಲ್ಲ ತಾಲೂಕಿನ ಗುಡೂರ ಗ್ರಾಮವು ಬಾಗಲಕೋಟೆ ಜಿಲ್ಲೆಯಲ್ಲಿಯೇ ಕಿರಾಣಿ ವ್ಯಾಪಾರಕ್ಕಾಗಿ,ಸಿಮೆಂಟ್ ವ್ಯಾಪಾರಕ್ಕಾಗಿ,ಕಬ್ಬಿಣ ವ್ಯಾಪಾರಕ್ಕಾಗಿ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಚೋಟಾ ಬಾಂಬೆ ಎಂದು ಹೆಸರುವಾಸಿಯಾಗಿದೆ.
ಇಲ್ಲಿ ಪ್ರತಿಯೊಂದು ವಸ್ತುಕೂಡಾ ಹೋಲ್ ಸೇಲ್ ದರದಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸುತ್ತ ಮುತ್ತಲಿನ ಎಲ್ಲ ಹಳ್ಳಿ ಹಾಗೂ ಪಟ್ಟಣದ ಜನ ಖರೀದಿಗಾಗಿ ಇಲ್ಲಿಗೆ ಆಗಮಿಸುತ್ತಾರೆ.ಬೆಳಿಗ್ಗೆ ಆದರೆ ಸಾಕು ಸಾವಿರಾರು ಜನ ಮುಗಿ ಬೀಳುವ ಈ ಗ್ರಾಮದಲ್ಲಿ ಪೋಲಿಸ್ ಇಲಾಖೆಯ ಹವಾಲ್ದಾರರಾದ ಶ್ರೀ ವಾಲಿಕಾರ , ಪೋಲಿಸ್ ಪೆದೆ ಶ್ರೀ ಎಸ್.ಎನ್.ತುಪ್ಪದ ಮತ್ತು ಇತರೆ ಪೋಲಿಸ್ ಸಿಬ್ಬಂದಿ ಮತ್ತು ಮಾಜಿ ಸೈನಿಕರಾದ ಶ್ರೀ ಬೆಳಗಲ್ಲ ಇವರ ದಿನನಿತ್ಯದ ಪರಿಶ್ರಮದಿಂದಾಗಿ ಲಾಕ್ ಡೌನ್ ನಿಯಮ ಬಹಳ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ.
ಸಾರ್ವಜನಿಕರು ಬೆಳಿಗ್ಗೆ 6 ರಿಂದ 9 ರವರೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಮಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಾರೆ.ಹುನಗುಂದ ಮತ್ತು ಇಲಕಲ್ಲ ತಾಲೂಕಿನಾದ್ಯಂತ ಇಲ್ಲಿಯ ವರೆಗೂ ಕೋವಿಡ್-19 ಯಾವುದೇ ಪ್ರಕರಣಗಳು ಕಂಡು ಬಂದಿಲ್ಲವಾದರು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟು ನಿಟ್ಟಿನ ನಿಯಮಗಳು ಪಾಲನೆಯಾಗುತ್ತಿವೆ.
ಪೋಲಿಸ್ ಸಿಬ್ಬಂದಿಯವರು ಪ್ರತಿದಿನ ಬೆಳಿಗ್ಗೆ 6 ರಿಂದ ತಮ್ಮ ಕಾರ್ಯವನ್ನು ಪ್ರಾರಂಭಿಸಿ ಬೆಳಿಗ್ಗೆ 9 ಗಂಟೆಯವರೆಗು ಇಡಿ ಗ್ರಾಮವನ್ನೆ ಸುತ್ತಾಡಿ ಜನರಿಗೆ ಮಾಸ್ಕ ಧರಿಸಲು ಹೇಳುತ್ತ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಮಾಡುವವರಿಗೆ ಲಾಟಿ ರುಚಿ ಉನಬಡಿಸುತ್ತ ಬೆಳಿಗ್ಗೆ 9 ಗಂಟೆಯನ್ನುವುದರೊಳಗಾಗಿ ಇಡಿ ಗುಡೂರ ಗ್ರಾಮವನ್ನೆ ನಿಶಬ್ದವಾಗಿರುವಂತೆ ಕಾರ್ಯ ನಿರ್ವಹಿಸುತ್ತಾರೆ.ಇವರಿಗೆ ಗ್ರಾಮದ ಜನರು ಹಾಗೂ ಪಂಚಾಯತಿ ಇಲಾಖೆಯ ,ಕಂದಾಯ ಇಲಾಖೆಯ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಹಾಗೂ ಮಾಜಿ ಸೈನಿಕರು ಹೀಗೆ ಎಲ್ಲರ ಸಹಕಾರ ಇದ್ದು ಲಾಕ್ ಡೌನ್ ನಿಯಮ ಪಾಲನೆ ಅಚ್ಚು ಕಟ್ಟಾಗಿದೆ.
Be the first to comment