ಜೀಲ್ಲಾ ಸುದ್ದಿಗಳು
ಬಾಗಲಕೋಟೆ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ (ಜೆ.ಜೆ.ಎಮ್) ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನ್ಕರ ತಿಳಿಸಿದರು.
ಜಿ.ಪಂ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಪ್ರತಿ ಮನೆಗೂ ಒಂದು ನಳ ಜೋಡನೆ ಮತ್ತು 50 ಎಲ್.ಪಿ.ಸಿ.ಡಿ ನೀರು ಪೂರೈಕೆಗಾಗಿ ಪ್ರಸ್ಥಾಪಿಸಲಾಗಿದೆ.ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಗಳಲ್ಲಿ ಸಮಿತಿ ರಚಿಸಲಾಗುತ್ತಿದೆ.ಇದರಿಂದ ಗ್ರಾಮ ಪಂಚಾಯತಿಯಿಂದ ಶೇಕಡಾ 10 ರಷ್ಟು ವಂತಿಗೆ ಪಡೆದು ದಿನದ 24 ಗಂಟೆಗಳ ಕಾಲ ನೀರು ಪೂರೈಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಈ ಯೋಜನೆಯನ್ನು ಕರ್ನಾಟಕದಲ್ಲಿ “ಮನೆ ಮನೆಗೆ ಗಂಗೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಘೋಷಿಸಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರದ ಶೇಕಡಾ 45 ,ರಾಜ್ಯ ಸರ್ಕಾರದ ಶೇಕಡಾ 45 , ಗ್ರಾಮ ಸಮುದಾಯದ ಶೇಕಡಾ 10 ರಷ್ಟು ವಂತಿಗೆಯನ್ನು ವಿಂಗಡಿಸಿದ್ದಾರೆ ಎಂದರು.
ಜಿಲ್ಲೆಯ ಒಟ್ಟು 6 ತಾಲೂಕುಗಳಲ್ಲಿ ಒಟ್ಟು 198 ಗ್ರಾಮ ಪಂಚಾಯತಿಗಳಿದ್ದು 662 ಗ್ರಾಮಗಳಿವೆ.ಗ್ರಾಮೀಣ ಭಾಗದಲ್ಲಿ 3,20,877 ಮನೆಗಳಿವೆ.ಕ್ರಿಯಾತ್ಮಕ ನಳಗಳನ್ನು ಹೊಂದಿರುವ ಮನೆಗಳು 13,563 ಇದ್ದು ಕ್ರಿಯಾತ್ಮಕ ನಳಗಳ ಜೋಡಣೆ ಮಾಡಬೇಕಾದ ಮನೆಗಳ ಸಂಖ್ಯೆ 3,07,314 ಇರುತ್ತದೆ.ಈ ಯೋಜನೆಗಾಗಿ 366.935 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಸರ್ಕಾಕ್ಕೆ ಸಲ್ಲಿಸಿರುವುದಾಗಿ ಎಂದು ತಿಳಿಸಿದರು.
Be the first to comment