ಜೀಲ್ಲಾ ಸುದ್ದಿಗಳು
ಬಾಗಲಕೋಟೆ:ತೆರೆಯ ಮುಂದೆ ರಾಜ-ರಾಣಿಯರಾಗಿ, ಕುಬೇರನಂತೆ ಮೆರೆಯುವ, ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ,ಖಳನಾಯಕನಂತೆ ನಟಿಸುವ ಕಲಾವಿದನ ಬದುಕು ಇಂದು ಲಾಕ್ ಡೌನ್ ದಿಂದಾಗಿ ಅತಂತ್ರ ಸ್ಥಿತಿ ತಲುಪಿದೆ.
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮದ ನಾದವಾಹಿನಿ ಸಂಗೀತ ಸಾಂಸ್ಕೃತಿಕ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಡ್ರೆಸ್ ಮಾಲಕರು ಹಾಗೂ ಶ್ರೀ ಗುರು ಪುಟ್ಟರಾಜ ವಸ್ತ್ರಾಲಂಕಾರದ ಡ್ರೆಸ್ ಮಾಲಕರಾದ ಶ್ರೀ ಬಿ.ವಿ.ಮಲ್ಲಾಪೂರ ಮತ್ತು ಶ್ರೀ ಸಂಗಮೇಶ ಇವರನ್ನು ಸಂದರ್ಶನ ಮಾಡಿದಾಗ ತಮ್ಮ ಬದುಕಿನ ಚಿತ್ತಾರವನ್ನೆ ಬಿಚ್ವಿಟ್ಟರು. ಇತರ ಕಲೆಗಳಿಂತ ರಂಗಭೂಮಿ ಕಲೆಗೆ ಹೆಚ್ಚು ಸಂವೇದನಾಶೀಲ ಗುಣವಿದೆ. ಸಮುದಾಯದ ಕಷ್ಟ-ಸುಖಗಳಿಗೆ ಸ್ಪಂದಿಸುತ್ತ ಸಮಕಾಲೀನವಾಗುತ್ತ ಈ ಪರಂಪರೆ ಮುಂದುವರಿದಿದೆ. ಚಲನಶೀಲ ಸ್ವಭಾವದ ರಂಗಭೂಮಿ ಕಲಾವಿದರ ಕೊರತೆ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಹೆಂಡತಿ-ಮಕ್ಕಳನ್ನು ಬಿಟ್ಟು ಬೆಂಗಳೂರು,ಮಂಗಳೂರು,ಬೀದರ್,ಗುಲ್ಬರ್ಗಾ,ಗೋವಾ ,ಮಹಾರಾಷ್ಟ್ರ ಹೀಗೆ ಹಲವು ಪ್ರದೇಶಗಳಿಗೆ ತೆರಳಿ ಟೆಂಟು ಹಾಕಿರುವ ಕಲಾವಿದರ ಬಣ್ಣದ ಬದುಕಿಗೆ ಡ್ರೆಸ್ ಗಳನ್ನು ನೀಡಿ ಅಂದಿನ ಉಪ ಜೀವನ ನಡೆಯುತ್ತಿತ್ತು.
ಆದರೆ ಈಗ ಲಾಕ್ ಡೌನ್ ದಿಂದಾಗಿ ನಮ್ಮ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ.ಬಟ್ಟೆಗಳನ್ನು ಮೂಟೆ ಕಟ್ಟಿ ಮೂಲೆಯಲ್ಲಿಟ್ಟು ಹಾಳಾಗುವ ಸ್ಥಿತಿಗೆ ಬಂದು ತಲುಪಿವೆ.
ಸರ್ಕಾರ ಕಲಾವಿದರು ಲಾಕ್ ಡೌನ್ ನಡುವೆ ಬದುಕು ಕಟ್ಟಿಕೊಳ್ಳಲು ಪ್ರತಿ ಕಲಾವಿದರಿಗೆ 2000 ರೂಪಾಯಿ ನೆರವು ಘೋಷಣೆ ಮಾಡಿದ್ದು ಇದು ಸಾದ್ಯವಾಗುತ್ತಿಲ್ಲ.ಸರ್ಕಾರ ಪ್ರತಿ ಕಲಾವಿದರಿಗೆ ಕನಿಷ್ಠ 5000 ರೂಪಾಯಿಗಳ ನೆರವು ನೀಡಿದರೆ ಕಲಾವಿದರು ತಮ್ಮ ಬದುಕು ಕಟ್ಟಿಕೊಳ್ಳಲು ಸಾದ್ಯ ಎಂದು ತಮ್ಮ ಅಂಬಿಗ್ ನ್ಯೂಸ್ ಮೂಲಕ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
Be the first to comment