ದೇಶದ ಸುದ್ದಿಗಳು
ರಾಷ್ಟ್ರಪತಿ ಭವನದಲ್ಲಿ ಅನಗತ್ಯ ವೆಚ್ಚಕ್ಕೆ ಕೋವಿಂದ್ ಕಡಿವಾಣ
ಹೊಸದಿಲ್ಲಿ: ಕೊರೊನಾ ವಿರುದ್ಧ ಸರಕಾರದ ಸಮರಕ್ಕೆ ಪೂರಕವಾಗಿ ತಮ್ಮ ಒಂದಿಡೀ ವರ್ಷದ ಸಂಬಳದಲ್ಲಿ ಶೇ. 30 ಕಡಿಮೆ ತೆಗೆದುಕೊಳ್ಳುವುದಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಕೊರೋನಾಗಾಗಿ ಆರ್ಥಿಕ ಸಂಪನ್ಮೂಲ ಕ್ರೊಢೀಕರನದ ಸರಕಾರದ ಪ್ರಯತ್ನಗಳಿಗೆ ಬೆಂಬಲವಾಗಿ ರಾಷ್ಟ್ರಪತಿ ಭವನದಲ್ಲಿ ಸಹ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ.
ತಮ್ಮ ಮಾರ್ಚ್ ಮಾಹೆಯ ವೇತನವನ್ನು ಶೇ. 30ರಷ್ಟು ಕಡಿತ ಮಾಡಲು ಸೂಚಿಸಿದ್ದ ರಾಷ್ಟ್ರಪತಿ ಈಗ ಇನ್ನೇ ಇನ್ನೊಂದು ವರ್ಷ ಮುಂದುವರಿಸುವಂತೆ ಸರಕಾರಕ್ಕೆ ಹೇಳಿದ್ದಾರೆ.
ಇದೇ ವೇಳೆ ರಾಷ್ಟ್ರಪತಿ ಭವನಕ್ಕೆ ಕೊಳ್ಳಬೇಕಿದ್ದ ಯಷಾರಾಮಿ ಲಿಮೊಸಿನ್ (ಕಾರು) ಸಹ ಈಗ ಸದ್ಯ ಬೇಡ ಎಂದು ಕೋವಿಂದ್ ಸೂಚನೆ ನೀಡಿದ್ದಾರೆ.
ತಮ್ಮ ಕಚೇರಿಯಿಂದಲೇ ಕೊರೋನಾಗಾಗಿ ವೆಚ್ಚ ಕಡಿತದ ಮೇಲ್ಪಂಕ್ತಿ ಹಾಕಿರುವ ರಾಮನಾಥ್ ಕೋವಿಂದ್ ಸಣ್ಣಪುಟ್ಟ ದುರಸ್ತಿ ಹೊರತಾಗಿ ರಾಷ್ಟ್ರಪತಿ ಭವನದಲ್ಲಿ ಯಾವುದೇ ನಿರ್ಮಾಣವನ್ನು ತಡೆಹಿಡಿದಿದ್ದಾರೆ.
ಇದರ ಜೊತೆಗೆ ಗಣಕ ಸೇವೆಗೆ ಮೊರೆ ಹೋಗುವ ಮೂಲಕ ತಮ್ಮ ಕಚೇರಿಯಲ್ಲಿ ಪೇಪರ್ ಸೇರಿದಂತೆ ಇತ್ರ ವಸ್ತುಗಳ ಮೇಲಿನ ವೆಚ್ಚವನ್ನು ಸಹ ಇಳಿಸಲು ಸೂಚಿಸಲಾಗಿದೆ.
ರಾಷ್ಟ್ರಪತಿ ಕೋವಿಂದ್ ಅವರ ಈ ನಡೆಯಿಂದಾಗಿ ಅವರ ವೇತನವೂ ಸೇರಿದಂತೆ ರಾಷ್ಟ್ರಪತಿ ಭವನದ ವಾರ್ಷಿಕ ವೆಚ್ಚದಲ್ಲಿ ಸರಕಾರಕ್ಕೆ ಶೇ. 20 ಉಳಿತಾಯವಾಗಲಿದೆ.
Be the first to comment