ಒಸಿ ಮಟ್ಕಾ ಸಾಮ್ರಾಜ್ಯದ ಕಿಂಗ್ ಪಿನ್ ರತನ್ ಲಾಲ್ ಖತ್ರಿಇನ್ನಿಲ್ಲ .

ವರದಿ. ಪ್ರಕಾಶ ಮಂದಾರ

 

ತನ್ನ ಬದುಕಿನ ಉದ್ದಕ್ಕೂ ಒಸಿಯಲ್ಲಿ ಓಪನ್ ಆದರೂ, ಒಸಿಯಲ್ಲೇ ಕ್ಲೊಸ್ ಆದರು

ಭಾರತದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜನ ಒಸಿ ಮಟ್ಕಾ ಆಡುತ್ತಾರೆ, ಮೊದಲಿಗೆ ಒಪನ್, ನಂತರ ಕ್ಲೋಸ್ ಅಂಕೆ ಮುಂಬೈನಿಂದ ರತನ್ ಲಾಲ್ ಖತ್ರಿ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ಡ್ರಾ ಮಾಡುತ್ತಿದ್ದ. ಆ ನಂಬರ್ ಗೆ ಹಣ ಕಟ್ಟಿದವರಿಗೆ ಬಿಡ್ಡರ್ ಎಂಬ ಬುಕ್ಕಿಗಳು ಒಪನ್ ಅಥವ ಕ್ಲೋಸಿಗೆ ಏಕ ಅಂಕಿಗೆ 1 ರೂಪಾಯಿ ಕಟ್ಟಿದರೆ 7 ಅಥವ 8 ರೂಪಾಯಿ, ಎರಡು ಅಂಕೆ ಸೇರಿಸಿ ಆ ನಂಬರ್ ಗೆ 1 ರೂಪಾಯಿ ಕಟ್ಟಿದರೆ 80 ರೂಪಾಯಿ ತಪ್ಪದೆ ಪಾವತಿ ಮಾಡುತ್ತಾನೆ.ವಿ ನಂಬರಿಂದ ಜನರಿಗೆ ತಲುಪಬೇಕಾದ ಹಣದಲ್ಲಿ ಇದುವರೆಗೂ ಯಾರಿಗೂ ಮೋಸವಾದ ಮಾತುಗಳೇ ಇಲ್ಲ .ಇದು ಒಂದು ರೀತಿ ಕಳ್ಳದಂಧೆಯಲ್ಲಿ ಪ್ರಾಮಾಣಿಕತೆ ಇರುವ ಆಟ ಎಂದರೆ ಅದು ಓಸಿ.

ಒಸಿ ಬರೆಯುವವರನ್ನ ,ಬರೆಸುವವರನ್ನ ಬಿಡ್ಡರ್ ಗಳನ್ನ ಫೋಲಿಸರು ಸದಾ ಬೇಟಿ ಆಡುತ್ತಿರುತ್ತಾರೆ, ಇದು ನಮ್ಮ ದೇಶದ ಕಾನೂನಿಗೆ ವಿರುದ್ದವಾದ ಜೂಜು,ಆದರೆ ಈ ಓಸಿ ಆಟವನ್ನು ಇದುವರೆಗೂ ದೇಶದಲ್ಲಿ ರದ್ದು ಮಾಡಲು ಸಾಧ್ಯವಾಗದೇ ಇರುವುದು ಮಾತ್ರ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ …

ಪ್ರತಿ ದಿನ ಒಸಿ ನಂಬರ್ ಡ್ರಾ ಮಾಡುವುದು ಮಾತ್ರ ರತನ್ ಲಾಲ್ ಖತ್ರಿ ಅನ್ನುವುದು ಸತ್ಯ .ಇದರಿಂದ ಖತ್ರಿಗೇನು ಲಾಭ.? ಅದು ಗೊತ್ತಿಲ್ಲ, ಖತ್ರಿಯನ್ನು ಬೇಟಿ ಆದವರಿಲ್ಲ, ಇಡೀ ದೇಶದಾದ್ಯಂತ ಈ ವ್ಯವಹಾರ ಮಾತ್ರ ಖತ್ರಿ ಮೂಗಿನ ನೇರಕ್ಕೆ ನಡೆಯುವುದು ಮಾತ್ರ ವಿಸ್ಮಯ.

ಇಂತಹ ನಿಗೂಡ ವ್ಯಕ್ತಿ, ಜನಪ್ರಿಯ ಓಸಿ ಕಿಂಗ್ ರತನ್ ಲಾಲ್ ಖತ್ರಿ 80ನೇ ವಯಸ್ಸಲ್ಲಿ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕೊಟ್ಯಾ೦ತರ ಓಸಿ ಆಡುವ ಜನ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ .?

ಓಸಿ ಆಟಗಾರರು ಶ್ರದ್ದಾಂಜಲಿ ಸಲ್ಲಿಸುತ್ತಾರೆ,ಇದರ ಜೊತೆಗೆ ಓಸಿ ಕಿಂಗ್ ಸತ್ತಿದ್ದಾರೆ ಎಂದು ,ಇಂದು ಇಂತಹ ನಂಬರ್ ಗೆ ಲಕ್ ಇದೆ ಅಂತ ಯಾರಾರೂ ಎಷ್ಟೆಷ್ಟು ಹಣವನ್ನು ಕಟ್ಟುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಈ ಆಟದಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಮನೆ ಮಠವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ .ಅದೇ ರೀತಿ ಅದೆಷ್ಟೋ ಜನರು ರಾತ್ರಿ ಬೆಳಗಾಗುವಷ್ಟರಲ್ಲಿ ಶ್ರೀಮಂತರಾದ ಉದಾಹರಣೆಗಳೂ ಇವೆ .

ಇಂದಿನಿಂದ ಓಸಿ ಡ್ರಾ ಯಾರು ಮಾಡುತ್ತಾರೆ ಎಂಬುವುದು ಗೊತ್ತಿಲ್ಲ!?

ಒಸಿ ಒಳಗಡೆ ನಿಗೂಢವಾಗಿ ದಂಧೆ ಮಾಡುತ್ತಿದ್ದ ವ್ಯಕ್ತಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಒಸಿ ಆಟವಾಡುತ್ತಿದ್ದ ಅವರ ಅಭಿಮಾನಿಗಳಿಗೆ,ಹಾಗೂ ಬಿಲ್ಡರ್ಗಳಿಗೆ ತುಂಬಲಾರದ ನಷ್ಟವಾಗಿದೆ

Be the first to comment

Leave a Reply

Your email address will not be published.


*