ಅಂಬಿಗ ನ್ಯೂಸ್ ಬಾಗಲಕೋಟೆ
ಮೇ 10 : ಕೊರೊನಾ ವೈರಾಣು ನಿಯಂತ್ರಿಸುವ ಹಿನ್ನಲೆಯಲ್ಲಿ ಹೊರರಾಜ್ಯಗಳಿಂದ ಜಿಲ್ಲೆಗೆ ಬರುವವರನ್ನು ಕಡ್ಡಾಯವಾಗಿ 14 ದಿನಗಳ ಅವಧಿಯವರೆಗೆ ಇನ್ನಿಟ್ಯೂಶನಲ್ ಕ್ವಾರಂಟೈನ್ ನಲ್ಲಿಟ್ಟು ಅವರ ಮೇಲೆ ನಿಗಾವಹಿಸುವಂತೆ ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರನ್ನು ಅವರ ಸ್ವಂತ ಊರು, ಗ್ರಾಮಗಳಿಗೆ ಹೋಗಲು ಬಿಡಬಾರದು. ಅವರನ್ನು ಕಡ್ಡಾಯವಾಗಿ ಸಾಂಸ್ಥಿಕ ದಿಗ್ಬಂಧನದಲ್ಲಿಡಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.
ಸಾರ್ವಜನಿಕರು ಕೊರೊನಾ ರೋಗಿಗಳು ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಬಂಧನೆಗಳು, ನಿರ್ದೇಶನಗಳನ್ನು ಪಾಲಿಸಲು ತಿಳಿಸಿದ್ದಾರೆ.
ಕೊರೊನಾ ವೈರಾಣು ವಿರುದ್ದ ಹೋರಾಡುವ ವೈದ್ಯರು, ನರ್ಸಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಉಪ ಮುಖ್ಯಮಂತ್ರಿ ಕಾರಜೋಳ ಕೋರಿದ್ದಾರೆ
Be the first to comment