ಬಿಗ್ ಇಂಪ್ಯಾಕ್ಟ್ :-ಹರಳಯ್ಯ ಸಮಗಾರ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ.

ವರದಿ: ಪ್ರಕಾಶ ಮಂದಾರ ದಾವಣಗೆರೆ

ಜೀಲ್ಲಾ ಸುದ್ದಿಗಳು

ಅಭಿನಂದಿಸಿದ ಸಮಾಜದ ಬಂಧುಗಳು .

ದಾವಣಗೆರೆ:-ಕಳೆದ ಎರಡು ದಿನದ ಹಿಂದೆ ಕರೋನಾ ಸಂಕಷ್ಟಕ್ಕೆ ಒಳಗಾದ ವೃತ್ತಿನಿರತ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ಅನ್ನು ಘೋಷಣೆ ಮಾಡಿದ್ದರು ಆದರೆ ಈ ವಿಶೇಷ ಪ್ಯಾಕೇಜಿನಲ್ಲಿ ಕೆಲವು ವೃತ್ತಿನಿರತ ಕುಟುಂಬಗಳನ್ನು ಕೈಬಿಟ್ಟಿದ್ದರು.

ಬೀದಿ ಬದಿಯಲ್ಲಿ ಕುಳಿತು ಪಾದರಕ್ಷೆಗಳೇ ದೇವರೆಂದು ನಂಬಿ ದಿನದ ಹನ್ನೆರಡು ಗಂಟೆ ಬಿಸಿಲು ಮಳೆ ಚಳಿ ಎನ್ನದೆ ಬೀದಿ ಬದಿಯಲ್ಲಿ ಕುಳಿತು ಜನರ ಪಾದರಕ್ಷೆಗಳನ್ನು ಸರಿಪಡಿಸಿ ಬರುವ ದಿನದ ಆದಾಯದಲ್ಲೇ ಜೀವನ ನಡೆಸುತ್ತಿದ್ದ ಹರಳಯ್ಯ ಸಮಗಾರ ಕುರಿತು ನಮ್ಮ ಅಂಬಿಗಾ ನ್ಯೂಸ್ ನಲ್ಲಿ ನಿನ್ನಯ ದಿನ ಸುದ್ದಿಯನ್ನು ಪ್ರಸಾರ ಮಾಡಿ ಸಮಾಜದ ಬಂಧುಗಳು ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿತ್ತು .

ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತುಕೊಂಡ ಹರಳಯ್ಯ ಸಮಗಾರ ಸಮಾಜದ ಬಂಧುಗಳು ಇಂದು ಮುಖ್ಯಮಂತ್ರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ .ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಇವರೊಂದಿಗೆ ದೂರವಾಣಿ ಕರೆಯ ಮೂಲಕ ಸಮಾಜದ ಬಂಧುಗಳು ಮಾತನಾಡಿ ನಮ್ಮ ಸಮುದಾಯವನ್ನು ವಿಶೇಷ ಪ್ಯಾಕೇಜ್ನಿಂದ ಹೊರಗಿಟ್ಟಿದ್ದಾರೆ . ನಮ್ಮ ಸಮುದಾಯವು ಕರೋನಾ ಲಾಕ್ ಡೌನ್ ಆದ ದಿನದಿಂದ ಕುಟುಂಬದ ನಿರ್ವಹಣೆ ನಿರ್ವಹಿಸಲಾಗದೆ ಅತ್ಯಂತ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದೇವೆ.ತಾವು ಕಳೆದ ಎರಡು ದಿನದ ಹಿಂದೆ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ನಲ್ಲಿ ನಮ್ಮ ಸಮುದಾಯಕ್ಕೂ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದರು .ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪನವರು ಹಾಗೂ ಸಚಿವ ಗೋವಿಂದ ಕಾರಜೋಳ ಇವರು ಕೂಡಲೇ ಹರಳಯ್ಯ ಸಮಾಜದ ಬಂಧುಗಳಿಗೆ ಕರೋನಾ ಸಂಕಷ್ಟದ ವಿಶೇಷ ಪ್ಯಾಕೇಜ್ ಮೂಲಕ ಲಿಡ್ಕರ್ ಸಂಸ್ಥೆಯಲ್ಲಿ ನೋಂದಾವಣೆಯಾದ ಕುಟುಂಬದ ಖಾತೆಗಳಿಗೆ ಐದು ಸಾವಿರ ರೂಪಾಯಿ ಹಣ ಹಾಕಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಹರಳಯ್ಯ ಸಮಾಜದ ಮುಖಂಡರು ಇಂದು ನಮ್ಮ ಪತ್ರಿಕೆಯೊಂದಿಗೆ ವಿಷಯವನ್ನು ಹಂಚಿಕೊಂಡರು .

ಕರೊನಾ ಸಂಕಷ್ಟದ ವಿಶೇಷ ಪ್ಯಾಕೇಜಿನಲ್ಲಿ ಹರಳಯ್ಯ ಸಮಗಾರ ಸಮಾಜವನ್ನು ಸಂಕಷ್ಟದ ಪರಿಹಾರಕ್ಕೆ ಸೇರಿಸಿಕೊಂಡಿದ್ದಕ್ಕೆ ಸಮಾಜದ ಬಂಧುಗಳು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇವರಿಗೆ ಸಮಾಜದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ .

Be the first to comment

Leave a Reply

Your email address will not be published.


*