ಜಿಲ್ಲಾ ಸುದ್ದಿ ಬಳ್ಳಾರಿ
ಕೊರೋನಾ ಬಗ್ಗೆ ಭಯ ಭೀತಿ ಬೇಡ,ಮುಂಜಾಗೃತಾ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕು ಎಂದು, ಹಗರಿಬೊಮ್ಮನಹಳ್ಳಿ ವೈದ್ಯಾಧಿಕಾರಿ ಡಾ”ಶ್ರೀಮತಿ ಸುಲೋಚನಮ್ಮರವರು ಕರೆ ನೀಡಿದರು.ಅವರು ಧಮನಿತ ಮಹಿಳೆಯರಿಗೆ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.ಕೋವೈಡ್19ನಿಯಂತ್ರಣಕ್ಕಾಗಿ ಸಕಾ೯ರ ಸಮರ ಸಾರಿದೆ,ಎಲ್ಲರೂ ಆರೋಗ್ಯ ಇಲಾಖೆಯ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಹಾಗೂ ಲಾಕ್ ಡೌನ್ ನ್ನು ಅನುಸರಿಸಬೇಕು,ಕೊರೋನಾ ವಾರಿಯಸ್೯ರವರಿಗೆ ಗೌರವ ನೀಡಬೇಕು ಮತ್ತು ಸಹಕರಿಸಬೇಕು ಎಂದರು.
ಬಳ್ಳಾರಿ ಜಿಲ್ಲಾ ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕ,ಅಜೀಂ ಪ್ರೇಮ್ ಜೀ ಪೌಂಡೇಷನ್ ಬೆಂಗಳೂರು ಇವರಿಂದ,ಬಳ್ಳಾರಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳ ಒಟ್ಟು194 ಧಮನಿತ ಮಹಿಳೆಯರಿಗೆ ಆಹಾರ ಸಾಮಾಗ್ರಿಗಳಿರುವ ಕಿಟ್ ನೀಡಲಾಯಿತು.ವೈದ್ಯರಾದ ಶಂಕರನಾಯ್ಕ್,ಸಮಾಲೋಕ ಅಶೋಕ,ಲ್ಯಾಬ್ ಟೆಕ್ನೀಷಿಯನ್ ಭರ್ಮಪ್ಪ ಹಾಗೂ ವಿಮುಕ್ತಿ ಬೋಡ್೯ ಸದಸ್ಯರಾದ ಆನೇಕಲ್ ಮರಿಯಮ್ಮ,ದಶಮಾಪುರ ಶಾಂತಮ್ಮ,ವಿಮುಕ್ತಿ ಸಂಪಕ೯ ಕಾಯ೯ಕತ೯ರಾದ ನಾಣ್ಯಾಪುರ ಹೆಚ್.ಸೋಮಶೇಖರ,ಹೆಚ್ ಬಿ ಹಳ್ಳಿಯ ಎಮ್.ಶಾರದ,ಬಿ.ಕಮಲಮ್ಮ ಇದ್ದರು
Be the first to comment