ಪತ್ರಿಕಾ ಮತ್ತು ಮಾಧ್ಯಮರಂಗದ ವರಿಗೂ ಸರ್ಕಾರ ಸಹಾಯಧನ ಘೋಷಿಸಲಿ :ರಂಗನಗೌಡ ಪಾಟೀಲ ದೇವಿಕೇರಾ

ವರದಿ ರಾಘವೇಂದ್ರ ಮಾಸ್ತರ ಸುರಪುರ

  1. ಜಿಲ್ಲಾ ಸುದ್ದಿಗಳು

ಹೌದು ಇಂದು ಕರೋನಾ ಲಾಕ್ ಡೌನ್ ಘೋಷಣೆಯಿಂದಾಗಿ ಅನೇಕ ವರ್ಗದ ಅನೇಕ ವಲಯಗಳಲ್ಲಿನ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಇದನ್ನು ಅರಿತ ಮಾನ್ಯ ಮುಖ್ಯಮಂತ್ರಿಗಳು ಅನೇಕ ವರ್ಗದ ಶ್ರಮಿಕರಿಗೆ ಸಹಾಯಧನ ಘೋಷಣೆ ಮಾಡಿದ್ದಾರೆ. ಅದರಂತೆ ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮರಂಗದ ಶ್ರಮಿಕರಿಗೂ ಸರಕಾರ ಸಹಾಯಧನ ಘೋಷಣೆ ಮಾಡುವಂತೆ ಬಿಜೆಪಿ ಯುವ ಮುಖಂಡ ರಂಗನಗೌಡ ಪಾಟೀಲ ದೇವಿಕೇರಾ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪತ್ರಿಕಾ,ಮುದ್ರಣ ವಿದ್ಯುನ್ಮಾನ ಮತ್ತು ದೃಶ್ಯ ಮಾಧ್ಯಮ ವರದಿಗಾರರು ಅನೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿ ಮಾಡಿದ್ದಾರೆ. ಅನೇಕರು ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿರುವ ಉದಾಹರಣೆಗಳು ಪಕ್ಕದ ರಾಜ್ಯ ಮತ್ತು ನಮ್ಮ ರಾಜ್ಯದಲ್ಲಿಯೂ ಕಾಣಬಹುದಾಗಿದೆ.

  1. ಆದರೆ ಈ ಮಾಧ್ಯಮಗಳಲ್ಲಿ ಹಗಲಿರುಳು ಜನಜಾಗೃತಿ ಮೂಡಿಸಲು ದುಡಿಯುವವರ ಜೀವನಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಇದನ್ನು ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ನಮ್ಮೆಲ್ಲರ ಒಳಿತಿಗಾಗಿ ಮಾಧ್ಯಮಗಳ ವರದಿಗಾರರಿಗೂ ಮುಖ್ಯಮಂತ್ರಿಗಳು ಸಹಾಯಧನ ಘೋಷಣೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*