ಸರಕಾರದ ಆದೇಶಕ್ಕೆ ಕ್ಯಾರೆ ಎನ್ನದ ಗ್ರೀನ್ ಜೋನ್ ಯಾದಗಿರಿ ಜಿಲ್ಲೆಯ ಜನತೆ

ವರದಿ ರಾಘವೇಂದ್ರ ಮಾಸ್ತರ ಸುರಪುರ

ಅಂಬಿಗ ನ್ಯೂಸ್ ಯಾದಗಿರಿ

ಯಾದಗಿರಿ: ಗ್ರೀನ್ ಝೋನ್ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಂಗಡಿಗಳು ಓಪನ್ ಆಗಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.

ಲಾಕ್ ಡೌನ್ ಹಿನ್ನಲೆ ಮನೆಯಲ್ಲಿದ್ದ ಜನರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯಾದಗಿರಿ, ಸುರಪುರ,ಹುಣಸಗಿ ಮತ್ತು ಶಹಾಪುರ ನಗರಗಳಿಗೆ ಆಗಮಿಸುತ್ತಿದ್ದಾರೆ. ಬಟ್ಟೆ ಅಂಗಡಿ, ಮೊಬೈಲ್, ಸಿಮೆಂಟ್ ಅಂಗಡಿ, ಮದ್ಯದಂಗಡಿ ಮೊದಲಾದ ಎಲ್ಲಾ ರೀತಿಯ ಅಂಗಡಿಗಳು ಓಪನ್ ಆಗಿವೆ.

ದೂರ-ದೂರದ ಹಳ್ಳಿಗಳಿಂದ ಬೈಕ್, ಅಟೋ, ಕಾರ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಟ್ಟಣಕ್ಕೆ ಸಂಚಾರ ಮಾಡುತ್ತಿದ್ದಾರೆ.

ಇಷ್ಟು ದಿವಸ ರಸ್ತೆಗಳು ಖಾಲಿಯಾಗಿ ಬಿಕೋ ಎನ್ನುತ್ತಿದ್ದವು.

ಈಗ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಜಾತ್ರೆಯಂತೆ ಜನ ನಗರಗಳಿಗೆ ಆಗಮಿಸುತ್ತಿದ್ದಾರೆ.

ಸರಕಾರ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳಲು ಕಡ್ಡಾಯ ಮಾಡಿದ್ರೂ ಜನತೆ ಸರ್ಕಾರದ ಎಲ್ಲ ಆದೇಶಗಳನ್ನು ಗಾಳಿಗೆ ತೂರಿ ಎಲ್ಲವನ್ನೂ ಮರೆತಿರುವಂತೆ ಕಾಣ್ತಿದೆ, ನಗರಸಭೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾಸ್ಕ್ ಗಳನ್ನು ಧರಿಸದೇ ಸಂಚರಿಸುವ ಬೈಕ್ ಮತ್ತು ಇತರೆ ವಾಹನಗಳ ಸವಾರಿಗೆ ದಿನನಿತ್ಯ ದಂಡದ ಮೇಲೆ ದಂಡ ಹಾಕಿದರೂ ನಮ್ಮ ಜಿಲ್ಲೆಯ ಜನಕ್ಕೆ ಇನ್ನೂ ಕೂಡಾ ಬುದ್ಧಿ ಬರ್ತೀಲ್ಲ.

ಕೆಲವು ವಿದ್ಯಾವಂತ ಜನರು ಹಾಗೂ ಯುವ ಸಮುದಾಯ ಕೂಡಾ ಸರಕಾರದ ಆದೇಶ ಪಾಲನೆ ಮಾಡುತ್ತಿಲ್ಲ.

ಆದ್ರೆ, ಜನರು ಸರಕಾರದ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ

ವಾಸ್ತವ ಸ್ಥಿತಿ ಏನೇ ಇರಲಿ ಗ್ರೀನ್ ಝೋನ್ ಜಿಲ್ಲೆಯಲ್ಲಿ ಜನರು ನಿರ್ಲಕ್ಷ್ಯವಹಿಸದೇ, ಮುಂಜಾಗ್ರತೆ ವಹಿಸುವದು ಅವಶ್ಯ..ಎನ್ನುವುದೇ ನಮ್ಮ ಕಳಕಳಿ.

 

Be the first to comment

Leave a Reply

Your email address will not be published.


*