ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ(ಕವಡಿಮಟ್ಟಿ):
ಕೊವಿಡ್-19ನಲ್ಲಿ ಎನ್.ಆರ್.ಐ.ಜಿ. ಅಡಿಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡುವಲ್ಲಿ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮೇಲುಗೈ ಸಾಧಿಸಿದ್ದಾರೆ. ಕೊರೊನಾ ಲಾಕಡೌನಲ್ಲೂ ಕಾರ್ಮಿಕರ ದಿನಾಚರಣೆಯ ತಿಂಗಳಲ್ಲಿಯೇ ಅಂದಾಜು 2ಲಕ್ಷ ಕಾಮಗಾರಿಯನ್ನು ಹಾಕಿಕೊಂಡು ಸುಮಾರು 60 ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಬಡ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮೇ.2 ರಿಂದ ಪ್ರಾರಂಭಗೊಂಡಿರುವ ಟ್ರಂಚಸ್ ಕಾಮಗಾರಿಯಿಂದ ಕವಡಿಮಟ್ಟಿ ಗ್ರಾಮದ ಸುತ್ತಮುತ್ತಲಿನ ಕೆರೆ ಮತ್ತು ಕೊಳವೆ ಭಾವಿಗಳಿಗೆ ಅಂರ್ಜಲಮಟ್ಟ ಹೆಚ್ಚಿಗೆ ಮಾಡುತ್ತಿದೆ. ಆದ್ದರಿಂದ ಈ ಕಾಮಗಾರಯನ್ನು ಮಳೆಗಾಲಕ್ಕೂ ಮುನ್ನವೆ ಮಾಡಲಾಗುತ್ತದೆ ಎಂದು ಪಿಡಿಓ ಪಿ.ಎಸ್.ಕಸನಕ್ಕಿ ತಿಳಿಸಿದರು.
ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ಹೊರ ವಲಯದಲ್ಲಿರುವ ಗುಡ್ಡದ ಪ್ರದೇಶದಲ್ಲಿ ಎನ್.ಆರ್.ಐ.ಜಿ ಅಡಿಯಲ್ಲಿ ಟ್ರಂಚಸ್ ನಿರ್ಮಾಣ ಕಾಮಗಾರಇಗೆ ಚಾಲನೆ ನೀಡಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮದ ಕೂಲಿ ಕಾರ್ಮಿಕರಿಂದ ಪ್ರಶಂಸೆ ವ್ಯಕ್ತವಾಗಿವೆ.
ತಾಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯತಿ:
ಕವಡಿಮಟ್ಟಿ ಗ್ರಾಮ ಪಂಚಾಯತಿಯು ಮುದ್ದೇಬಿಹಾಳ ತಾಲೂಕಿನಲ್ಲಿಯೇ ಮಾದರಿಯಾಗಿದೆ. ಪಂಚಾಯತಿ ಕಟ್ಟಡ ಸೇರಿದಂತೆ ಸುತ್ತಮುತ್ತಲೂ ಸಣ್ಣ ಉದ್ಯಾನ ವನವು ಎಲ್ಲರ ಗಮನ ಸೆಳೆಯುವಂತಿದೆ. ಇನ್ನೂ ಬಂದಂತ ಜನರಿಗೆ ಆರ್.ಓ. ಫ್ಲಿಟರ್ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಕವಡಿಮಟ್ಟಿ ಗ್ರಾಮ ಪಂಚಾಯತಿಯು ಉಳಿದ ಎಲ್ಲ ಪಂಚಾಯತಿಗಳಿಗೂ ಮಾದರಿಯಾಗಿದೆ.
Be the first to comment