ಭಾರತದಲ್ಲಿ ಪ್ರಪ್ರಥಮವಾಗಿ ಮೇ ಡೆ ಕಾರ್ಮಿಕ ದಿನಾಚರಣೆ ಯನ್ನು ಆಚರಿಸಿದ್ದು:- ಸಿಂಗಾರವೇಲು ಚೆಟ್ಟಿಯಾರ್.

ನಮ್ಮವರು ಹೆಮ್ಮೆಯವರು

ಭಾರತದಲ್ಲಿ ಪ್ರಪ್ರಥಮವಾಗಿ ಮೇ ಡೆ ಕಾರ್ಮಿಕ ದಿನಾಚರಣೆ ಯನ್ನು ಆಚರಿಸಿದ್ದು OBC ಐಕಾನ್ ಮೀನುಗಾರ ಸಮುದಾಯದ
ಹಿಂದೂಸ್ಥಾನ್ ಲೇಬರ್ ಕಿಸಾನ್ ಪಾರ್ಟಿಯ
ಮುಖಂಡರಾದ ಸಿಂಗಾರವೇಲು ಚೆಟ್ಟಿಯಾರ್.

1886ನೇ ಇಸವಿಯ ಇದೇ ದಿನಾಂಕದಂದು ತಮ್ಮನ್ನು ದಿನಕ್ಕೆ 15 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಮಾಲೀಕರ ವಿರುದ್ಧ ಚಿಕಾಗೊ ನಗರದ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಪ್ರತಿ ದಿನದ ದುಡಿವ ಸಮಯವನ್ನು 8 ಗಂಟೆಗಳಿಗೆ ಮಿತಿಗೊಳಿಸಬೇಕೆಂದು ಆಗ್ರಹಿಸಿದ್ದರು.

ಮೀನುಗಾರ ಕುಟುಂಬದಲ್ಲಿ ಜನಿಸಿದ ‘ಮಲಯಾಪುರಂ ಸಿಂಗಾರವೇಲು ಚೆಟ್ಟಿಯಾರ್’ ಸ್ಥಾಪಿಸಿದ್ದ ‘ಲೇಬರ್ ಕಿಸಾನ್ ಪಾರ್ಟಿ’ಯು ಇಂಡಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ,1923ರಲ್ಲಿ ಅಂದಿನ ಮದ್ರಾಸಿನ ‘ಟ್ರಿಪ್ಲಿಕೇನ್ (ತಿರುವಳ್ಳಿಕ್ಕೇಣಿ) ಕಡಲ ತೀರ’ ಹಾಗೂ ‘ಮದ್ರಾಸ್ ಹೈಕೋರ್ಟ್’ ಎದುರಿನ ಕಡಲ ತೀರದಲ್ಲಿ ಎರಡು ಪ್ರತ್ಯೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ‘ಮೇ ದಿನ’ ಆಚರಿಸಿತ್ತು.

Be the first to comment

Leave a Reply

Your email address will not be published.


*