ಜೀಲ್ಲಾ ಸುದ್ದಿಗಳು
ಬೀದರ್, ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಠಾಚಾರ ನಿಗ್ರಹ ಸಮಿತಿಯ ವತಿಯಿಂದ ನಿನ್ನೆ ತಾಲೂಕಿನ ಸಂಗನಳ್ಳಿ ಗ್ರಾಮದಲ್ಲಿ 1 ಕುಟುಂಬಕ್ಕೆ 5 ಕಿ.ಗ್ರಾಂ ಅಕ್ಕಿ ಮತ್ತು 1 ಕಿ.ಗ್ರಾಂ ಟೊಮೊಟೊ ಹೀಗೆ ಸುಮಾರು 50 ಕುಟುಂಬಗಳಿಗೆ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರೂ ಹಾಗೂ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ವಿಕಲಚೇತನರ ಮಹಿಳಾ ರಾಜ್ಯ ಅಧ್ಯಕ್ಷೆ ಮಂಗಲಾ ಮರಕಲೆ, ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ತಾಲೂಕ ಮಹಿಳಾ ಅಧ್ಯಕ್ಷೆ ಜಗದೇವಿ ಕವಲೆ, ತಾಲೂಕ ಕಾರ್ಯದರ್ಶಿ ಲಲಿತ ಕವಲೆ, ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಭಾವಿದೊಡ್ಡಿ, ಸಮಿತಿಯ ಕೂಲಿ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ವೆಂಕಟ ವಡಿಯರ, ಸ್ಥಳಿಯ ಗ್ರಾಮ್ ಪಂಚಾಯತ ಸದಸ್ಯ ರಿತೀಷ ಬೀರನಳೆ, ಶಿವಕುಮಾರ ರಾಯಗುಂಡೆ, ಭಾಗ್ಯಶ್ರೀ ಮರಕಲೆ, ಸಂಗಮೇಶ ಸುಡಗುಡೆ, ಸಿದ್ಧಾರ್ಥ ಚಿದರಿ, ರಾಹುಲ ಕವಲೆ, ರೇವಣಸಿದ್ಧ ಹಡಪದ, ದಿಲೀಪ ಕಾಮಾಳೆ, ಸಂಜುಕುಮಾರ್ ಕ್ಯಾನೆ, ಸಚಿನ್ ಹಲಗೆ ಹಾಗೂ ಇತರರಿದ್ದರು
Be the first to comment