ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಶಹಾಪುರ ಪೋಲಿಸರ ದಾಳಿ ಮೂರು ಜನ ಆರೋಪಿಗಳ ಬಂಧನ

ವರದಿ:ರಾಘವೇಂದ್ರ ಮಾಸ್ತರ ಸುರಪುರ

 ಕ್ರೈಮ್

ಅಂಬಿಗ ಶಹಾಪುರ

ಹೌದು ಇಂದು ೪೦೭ ಟೆಂಪೋ ವಾಹನವೊಂದರಲ್ಲಿ ಆಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡಿಕೊಂಡು ಶಹಾಪುರ ಕಡೆಗೆ ಹೊರಟ್ಟಿದ್ದ ವಾಹನದ ಮೇಲೆ ಖಚಿತ ಮಾಹಿತಿ ಮೇರೆಗೆ ಯಾದಗಿರಿ ಜಿಲ್ಲಾ ಎಸ್ಪಿ ಋಷಿಕೇಶ ಭಾಗವಾನ ಸೊನಾವಣೆ ಹಾಗೂ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಸೂಕ್ತ ಮಾರ್ಗದರ್ಶನದಲ್ಲಿ ಶಹಾಪುರ ಪಿ,ಐ ಹನುಮರಡ್ಡೆಪ್ಪ ಹಾಗೂ ಪಿಎಸ್,ಐ ಚಂದ್ರಕಾಂತ ಮೆಕಾಲೆ ಹಾಗೂ ಸಿದ್ದೇಶ್ವರ ಗೆರೆಡೆಯವರ ಪೋಲಿಸರ ತಂಡದ ಎಚ್,ಸಿ, ಸಂಗನಗೌಡ ಬಾಬು ನಾಯ್ಕಲ್ ಸಿಪಿಸಿ ಲಕ್ಕಪ್ಪ ಪಿಸಿ ಸುನೀಲ್,ಬಸ್ಸಯ್ಯ, ಶಿವರಾಜ, ಸಿದ್ರಾಮಯ್ಯ, ನಾಗರಡ್ಡಿ ಯವರು ಶಹಾಪುರ ನಗರದ ಹೊರಹೊಲಯದ ಯಾದಗಿರಿ ಮತ್ತು ಶಹಾಪುರ ಮಧ್ಯದ ದೊರನಳ್ಳಿ ಯಿಂದ ಬರುವಾಗ ಶಿರವಾಳ ಕ್ರಾಸ್ ಹತ್ತಿರ ವಾಹನ ತಡೆದು ತಪಾಸಣೆ ಕಾರ್ಯ ಕೈಗೊಂಡಾಗ ಅದರಲ್ಲಿದ್ದ 3000 ಕೆಜಿ ಪಪ್ಪಾಯಿ (ಅಂದಾಜು ಮೌಲ್ಯ 18000 ರೂಗಳು) ಹಾಗೂ 5 ಕೆಜಿ 300 ಗ್ರಾಂ, ಗಾಂಜಾ ಅಂದಾಜು ಮೌಲ್ಯ 55000 ಸಾವಿರ ರೂ, ಮತ್ತು 20 ಸಾವಿರ ರೂ ನಗದು ಹಣವನ್ನು ಜಪ್ತಿ ಮಾಡಲಾಗಿದ್ದು 

  ತನಿಖೆ ಸಂಧರ್ಭದಲ್ಲಿ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,

ಈ ಕುರಿತು ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ,

Be the first to comment

Leave a Reply

Your email address will not be published.


*