ಜೀಲ್ಲಾ ಸುದ್ದಿಗಳು
ನಾಲತವಾಡ:ಕೊವಿಡ್-19ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ನಾಲತವಾಡ ಹೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಏಪ್ರಿಲ್ 2020ನೇ ತಿಂಗಳಿನ ವಿದ್ಯುತ್ ಬಿಲ್‌ಗಳನ್ನು ಸರಾಸರಿ ಆಧಾರದ ಮೇಲೆ ಮಾಡಲಾಗಿದ್ದು, ವಿದ್ಯುತ್ ಗ್ರಾಹಕರು ರೀಡಿಂಗ್ ಪ್ರಕಾರ ಬಿಲ್ಲುಇಚ್ಛಿಸಿದಲ್ಲಿತಮ್ಮ ವಿದ್ಯುತ್ ಮಾಪಕದ ರೀಡಿಂಗ್‌ನ್ನು ಎಸ್‌ಎಂಎಸ್, ವಾಟ್ಸಆ್ಯಪ್, ಇ- ಮೇಲ್ ಮುಖಾಂತರ ಸಲ್ಲಿಸಿದಲ್ಲಿಆ ರೀಡಿಂಗ್ ಪ್ರಕಾರ ಸಂಬಂಧಿಸಿದ ವಿದ್ಯುತ್ ಗ್ರಾಹಕರಿಗೆ ಬಿಲ್ ಜಾರಿ ಮಾಡಲಾಗುತ್ತಿತ್ತು,ಮೇ ತಿಂಗಳ ಬಿಲ್ ನ್ನು ಗ್ರಾಹಕರ ಮನೆಗೆ ತಲುಪಿಸಲು ನಾಲತವಾಡ ಹೆಸ್ಕಾಂ ಇಂಜಿನಿಯರ್ ಮಲ್ಲಿಕಾರ್ಜುನ ತೆಗ್ಗಿನಮಠ ತಿಳಿಸಿದರು.
ಪಟ್ಟಣದ ಹೆಸ್ಕಾಂ ಕಛೇರಿಯಲ್ಲಿ ಮೀಟರ್ ರೀಡರ್ಗಳಿಗೆ ಮಾಸ್ಕ್,ಸ್ಯಾನಿಟೈಸರ್,ಕೈಗವಸು ವಿತರಿಸಿ ಮಾತನಾಡಿದ ಅವರು ಅಂತರ ಕಾಯ್ದುಕೊಂಡು,ಮಾಸ್ಕ್ ಧರಿಸಿ ಗ್ರಾಹಕರ ಮನೆಗೆ ತೆರಳಿ ಮೀಟರ್ ರೀಡಿಂಗ್ ಮಾಡಿಯೇ ಬಿಲ್ ಕೊಡಲು ತಿಳಿಸಿದರು.ಸ್ಥಳದಲ್ಲೇ ಬಿಲ್ ಹಣ ಕಟ್ಟುವವರಿದ್ದರೆ ಸ್ವೀಕರಿಸಿ ರಶೀಧಿ ನೀಡಬೇಕು.ಈ ಕುರಿತ ಗ್ರಾಹಕರು ದೂರವಾಣಿಗೆ ಸಂಪರ್ಕಿಸಿ ಬಿಲ್ ಬಗ್ಗೆ ಮಾಹಿತಿ ಪಡೆಯಬಹುದು.ಈ ಎರಡು ತಿಂಗಳ ಬಿಲ್ ಗೆ ದಂಡವಾಗಲಿ,ಬಡ್ಡಿಯಾಗಲಿ ಇರುವುದಿಲ್ಲ, ವಿದ್ಯುತ್ ಗ್ರಾಹಕರು ಆನ್‌ಲೈನ್ ಅಥವಾ ಡಿಜಿಟಲ್ ಪೇಮೆಂಟ್ ಮುಖಾಂತರ ಬಿಲ್ ಪಾವತಿಸುವುದು ಹಾಗೂ ಖುದ್ದಾಗಿ ಶಾಖೆಗಳಲ್ಲಿನಗದು ಕೌಂಟರ್‌ಗಳ ಮುಖಾಂತರ ಸುರಕ್ಷಾ ಮುನ್ನೆಚ್ಚರಿಕೆಗಳೊಂದಿಗೆ ಪಾವತಿಸಬಹುದು.
ವಿದ್ಯುತ್ ಗ್ರಾಹಕರಲ್ಲಿ ಏನಾದರೂ ಸಂಶಯಗಳಿದ್ದರೆ ಸಹಾಯವಾಣಿ-9480883668 ಗೆ ಸಂಪರ್ಕಿಸಿ ಅಥವಾ ಜಾಲತಾಣ ಮೂಲಕ ಬಿಲ್ ಮಾಹಿತಿ ಪಡೆದು,ನಿಗದಿತ ಕೌಂಟರ್ ಗಳಲ್ಲಿ ವಿದ್ಯುತ್ ಬಿಲ್ ಕಟ್ಟಬಹುದು. ಇಲ್ಲವಾದರೆ ಆನ್ಲೈನ್ ಮೂಲಕ ಬಿಲ್ ಪಾವತಿಸಬಹುದಾಗಿದೆ ಎಂದು ತೆಗ್ಗಿನಮಠ ಹೇಳಿದರು.
ಈ ವೇಳೆ ಎಇಇ ಆರ್.ಎನ್.ಹಾದಿಮನಿ,ಎಂ.ಜಿ.ಸಜ್ಜನ,ಬಿ.ಐ.ದರ್ಲೆ,ಎಸ್.ಎ.ಗೂಳಿ ಇದ್ದರು.
Be the first to comment