ಸಡಲಿಕೆಯಲ್ಲಿ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ತಹಸೀಲ್ದಾರ ಮಳಗಿ

ವರದಿ: ರವಿ ತೇಲಂಗಿ

ಜಿಲ್ಲಾ ಸುದ್ದಿಗಳು



 ಮುದ್ದೇಬಿಹಾಳ: 

ಸೋಮವಾರ ಲಾಕಡೌನ ಸಡಲಿಕೆಯಾಗುತ್ತಿದ್ದರೂ ನಿಯಮಗಳು ಜಾರಿಯಲ್ಲಿರುತ್ತವೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯಾಗಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತಹಸೀಲ್ದಾರ ಜಿ.ಎಸ್.ಮಳಗಿ ಹೇಳಿದರು.
ರವಿವಾರ ತಹಸೀಲ್ದಾರ ಕಛೇರಿಯ ಸಭಾ ಭವನದಲ್ಲಿ ವ್ಯಾಪಾರಸ್ಥರ ಸಭೆ ನಡೆಸಿ ಮಾತನಾಡಿದ ಅವರು, ವ್ಯಾಪಾರಸ್ಥರು ಕಡ್ಡಾಯವಾಗಿ ಮಾಸ್ಕ ಮತ್ತು ಗ್ಲೌಸ್ ಧರಿಸಿ ಸಾಮಾಜಿತ ಅಂತರವನ್ನು ಪ್ರತಿಯೊಂದು ಅಂಗಡಿ ಎದುರಿಗೆ ಕಾಯ್ದುಕೊಳ್ಳಬೇಕು. ಬೆಳಿಗ್ಗೆ 7 ರಿಂದ ಸಂಜೆ 8 ಗಂಟೆಯವರೆಗೂ ಸಮಯವನ್ನು ನೀಡಲಾಗಿದ್ದು ವ್ಯಾಪಾಸ್ಥರು ಅಷ್ಟರೊಳಗೆ ತಮ್ಮ ವ್ಯಾಪಾರವನ್ನು ಮಾಡಬೇಕು. ಇಲ್ಲವಾದರೆ ಅವರಿಗೂ 186 ಸೇಕ್ಷನ್ ಪ್ರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಹೇಳಿದರು.
ಯಾವೆಲ್ಲ ವ್ಯಾಪಾರಕ್ಕೆ ಅವಕಾಶ ಇದೆ ? 
ಕ್ಷೌರಿಕ ಸಲೂನ್ ಗಳು, ಹೂವಿನ ಅಂಗಡಿ,ಬಂಗಾರದ ಅಂಗಡಿ, ಕಿರಾಣಿ ,ಬಣ್ಣದ ಅಂಗಡಿ, ಬಟ್ಟೆ ಅಂಗಡಿ,ಮೊಬೈಲ್ ಶಾಪ್ , ಪೋಟೋ ಸ್ಟುಡಿಯೋ ಹೋಟೆಲ್ ಮುಂತಾದ ವ್ಯಾಪಾರಕ್ಕೆ ಅವಕಾಶ ಇದೆ ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು ಹೋಟೆಲ್ ಗಳಿಗೆ ಪಾರ್ಸಲ್ ಗೆ ಮಾತ್ರ ಅವಕಾಶ ಇದೆ ! 
ಕ್ಷೌರಿಕ ಅಳಲು ಆಲಿಸದ ಅಧಿಕಾರಿಗಳು:
ಕ್ಷೌರಿಕ ವೃತ್ತಿಯನ್ನು ಮಾಡುವವರಿಗೆ ಆರೋಗ್ಯ ಇಲಾಖೆ ನಿರ್ದೇಶನ ಹಾಗೂ ಮುಂಜಾಗ್ರತೆಯ ಅಗತ್ಯ ಸಾಮಗ್ರಿಗಳನ್ನು ನೀಡಬೇಕು ಕ್ಷೌರಿಕ ವೃತ್ತಿಯನ್ನು ಅತಿ ಹತ್ತಿರದಿಂದ ಮಾಡುತ್ತೇವೆ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಬಡ ಕ್ಷೌರಿಕರಿದ್ದಾರೆ ಎಲ್ಲರಿಗೂ ಸ್ಯಾನಿಟೇಸರ್ ಹ್ಯಾಂಡ್ ಗ್ಲೋಜ್ ಖರೀದಿಸಲು ಆಗಲ್ಲ ದಯವಿಟ್ಟು ನಮ್ಮ ಮನವಿಯನ್ನು ಸರಕಾರ ಆಲಿಸಬೇಕು ನಮಗೆ ಆರೋಗ್ಯ ಇಲಾಖೆ ಸೂಕ್ತ ಸಲಹೆ ನಿರ್ದೇಶನ ನೀಡಬೇಕೆಂದು ಸವಿತ ಸಮಾಜದ ಅಧ್ಯಕ್ಷ ರ ಮನವಿಗೆ ತಾಲ್ಲೂಕು ಆಡಳಿತ ಅಧಿಕಾರಿಗಳು ಉತ್ತರಿಸದೆ ಜಾಣ ಕಿವಡುತನ ಪ್ರದರ್ಶಿಸಿದರು 
ಕರೋನ ಸೈನಿಕರಿಗೆ ಪುಷ್ಪವೃಷ್ಟಿ; 
ಕರೋನ ಸೈನಿಕರಾದ ಆರಕ್ಷಕ ಬಂಧುಗಳಿಗೆ ಮುದ್ದೇಬಿಹಾಳ ದ ಬಟ್ಟೆ ಅಂಗಡಿ ವ್ಯಾಪಾರಸ್ಥರು ಪುಷ್ಪವೃಷ್ಠಿ ಮಾಡಿ ಅಭಿನಂದಿಸಿದರು.

Be the first to comment

Leave a Reply

Your email address will not be published.


*