ಕೋಲಿ ಸಮಾಜದ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇವೆ: ಶಾಸಕ ಉಮೇಶ್ ಜಾಧವ್

ಸಂಶೋಧನ ವಿದ್ಯಾರ್ಥಿಗಳಾದ ಸರ್ದಾರ್ ರಾಯಪ್ಪ ಮತ್ತು ಸಾಯಿಬಣ್ಣ ಗುಡಬಾ ಅವರಿಗಾದ ಅನ್ಯಾಯ ಕುರಿತು ರಾಜಪಾಲರ ಗಮನಕ್ಕೆ ತರುತ್ತೇನೆ ಎಂದು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಂಶೋಧನಾ ಅಧ್ಯಯನ ಮಾಡುತ್ತಿರುವ ಸರ್ದಾರ್ ರಾಯಪ್ಪ ಮತ್ತು ಸಾಯಿಬಣ್ಣ ಗುಡಬಾ ತಮಗಾದ ಅನ್ಯಾಯ ಖಂಡಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.


ರಾಜಕೀಯವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೋಲಿ ಸಮಾಜ ಬಾಳ ಕೆಳಮಟ್ಟದಲ್ಲಿದೆ.


ಅಂತಹ ಬಡತನದ ಸ್ಥಿತಿಯಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಸಾಲ ಸೂಲ ಮಾಡಿ ಓದಿಸುತ್ತಾರೆ. ಅಂಥದರಲ್ಲಿ ರೈತರ ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಇಂದು ಆಗುತ್ತಿಲ್ಲ. ಆದರೆ ಇವರು ಪಿ Ph.Dವರೆಗೆ ಓದಿದ್ದು ಒಂದು ದೊಡ್ಡ ಸಾಧನೆ.


ಕಷ್ಟಪಟ್ಟು ಓದಿದವರಿಗೆ ಆರು ವರ್ಷಗಳವರೆಗೆ ಪಿಎಚ್ಡಿ ಮುಗಿಸಿ ಕೊಡುತ್ತಿಲ್ಲ ವೆಂದರೆ ಇದು ದೊಡ್ಡ ಅನ್ಯಾಯವಲ್ಲವೇ? ಉದ್ದೇಶಪೂರ್ವಕವಾಗಿ ಪಿಎಚ್ಡಿ ಯನ್ನು ತಡೆ ಹಿಡಿದಿದ್ದರಿಂದ ಇವರ ಭವಿಷ್ಯ ಹೇಗೆ ಮುಂದೆ ಪ್ರೊಫೆಸರ್ ಆಗಿ ತಮ್ಮ ಕುಟುಂಬ’ ಸಮಾಜಕ್ಕೆ ಆರ್ಥಿಕ ಶಕ್ತಿಯಾಗಬೇಕೆದವರ ಪಾಡು ಇಂದು ಬೀದಿಗೆ ಬಂದಿದೆ ಎಂದರೆ ಏನಿದು ವ್ಯವಸ್ಥೆ?
ಈ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ ಹತ್ತು ದಿನಗಳಾದರು ಕೂಡ ಜಿಲ್ಲಾಧಿಕಾರಿಗಳಾಗಲಿˌ ವಿಶ್ವವಿದ್ಯಾಲಯದ ಕುಲಪತಿ ಗಳಾಗಲಿ ಕುಲ ಸಚಿವರಾಗಲಿ ಯಾರೊಬ್ಬ ಅಧಿಕಾರಿಗಳು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲವೆಂದರೆ ಆಶ್ಚರ್ಯದ ಸಂಗತಿ.

  1. ಇದು ರಾಷ್ಟ್ರಮಟ್ಟದ ಸುದ್ದಿ ಆಗಬೇಕಿತ್ತು ಆದರೆ ಇಂದು ಎಲ್ಲೂ ಸುದ್ದಿಯಾಗಿಲ್ಲ ಮೊದಲೇ ನೀವು ನನ್ನ ಗಮನಕ್ಕೆ ತಂದಿದ್ದರೆ ವಿಧಾನಸೌಧದಲ್ಲಿ ಇದರ ಬಗ್ಗೆ ಧ್ವನಿ ಎತ್ತಿ ಸರಕಾರದ ಗಮನಕ್ಕೆ ತರುತ್ತಿದ್ದೆ.


ಇನ್ನೂ ಕಾಲ ಮಿಂಚಿಲ್ಲ ನಾನು ರಾಜ್ಯಪಾಲರ ಗಮನಕ್ಕೆ ತರುತ್ತೇನೆ. ಮತ್ತು ನಿಮಗೆ ನೇರವಾಗಿ ಅವರಿಗೆ ಭೇಟಿ ಮಾಡುತ್ತೇನೆ ಎಂದರು.
ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೋಲಿ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಹಿಂದುಳಿದಿದ್ದರೂ ರಾಜ್ಯದ ರಾಜಕೀಯವನ್ನೇ ಬದಲಾಯಿಸಿ ತಮಗೆ ಬೇಕಾದವರನ್ನು ಅಧಿಕಾರಕ್ಕೆ ತರುವ ಶಕ್ತಿ ಇದೆ ಎಂದರು.
ನಿಮಗೆ ಆದ ಅನ್ಯಾಯಕ್ಕೆ ನ್ಯಾಯ ಕೇಳುವುದು ನಿಮ್ಮ ಹಕ್ಕು ನೀವು ಒಗ್ಗಟ್ಟಾಗಿದ್ದಾರೆ ಎಲ್ಲ ರಂಗದಲ್ಲಿ ನಿಮಗೆ ನ್ಯಾಯ ನಿಚ್ಚಿತಾವಾಗಿ ಸಿಗುತ್ತದೆ. ಆದರೆ ನಿಮ್ಮ ಹೋರಾಟಗಳು ನಿರಂತರವಾಗಿ ಇರಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶೋಭಾ ಎಸ್ ಬಾಣಿ ಶರಣಪ್ಪ ತಳವಾರ್ ಶಿವಲಿಂಗಪ್ಪ ಕಿನ್ನೂರ ದೇವಿಂದ್ರ ಚಿಗರಳ್ಳಿ, ನಿಂಗಣ್ಣ ದೇವಣ್ಣಗಾವ್, ಅನೀಲ ವಚ್ಚಾ, ಶಿವರಾಯ ಹರವಾಳ ಮತ್ತು ಸಮಾಜದ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*