ಸೇಡಂ. ಲಕ್ಷಾಂತರ ಭಕ್ತರ ಆರಾಧ್ಯದೈವ, ನಡೆದಾಡುವ ದೇವರು, ದೈವೀ ಸ್ವರೂಪಿ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಏರುಪೇರಾಗಿದೆ. ಸುಮಾರು ೮ ದಿನಗಳಿಂದ ಭಕ್ತರಿಗೆ ದರ್ಶನ ನೀಡಿಲ್ಲ ಎನ್ನಲಾಗಿದೆ.
ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದಲ್ಲಿ 8೬ ವರ್ಷಗಳಿಂದ ನೆಲೆಸಿರುವ ಅಮ್ಮನವರು ಸದಾಕಾಲ ಭಕ್ತರ ಉದ್ಧಾರಕ್ಕಾಗಿ ಅನ್ನ, ನೀರು ಇಲ್ಲದೆ ಕೇವಲ ಧ್ಯಾನದ ಮೂಲಕ ಭಕ್ತರ ಬಾಳು ಬೆಳಗುತ್ತಿದ್ದಾರೆ.
ವಿಶ್ವಮಟ್ಟದಲ್ಲೂ ಸಹ ಭಕ್ತರನ್ನು ಹೊಂದಿರುವ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಭಕ್ತರ ಮನದಲ್ಲಿ ಆತಂಕದ ಛಾಯೆ ಮನೆಮಾಡಿದೆ.
ಅಮ್ಮನವರ ಆರೋಗ್ಯ ಶೀಘ್ರವೇ ಸುಧಾರಿಸಲಿ ಎಂದು ಭಕ್ತರು ದೇವರ ಮೊರೆ ಹೋಗಿದ್ದಾರೆ.
Be the first to comment