ಬೀದರ ಏಪ್ರಿಲ್ 29 (ಅಂಬಿಗ ನ್ಯೂಸ್ ): ಬೀದರ ಜಿಲ್ಲೆಯ ಘೊಂಡಪಳ್ಳಿ ಮತ್ತು ಕಪಲಾಪೂರನಲ್ಲಿ ಸುಮಾರು 72ಕ್ಕೂ ಹೆಚ್ಚು ಅಂತರರಾಜ್ಯ ವಲಸೆ ಕಾರ್ಮಿಕರಿಗೆ ಏ.29ರಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬದ ಮತ್ತು ಕೊರೋನಾ ಸೈನಿಕರು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.
ಅಂತಾರಾಜ್ಯ ವಲಸೆ ಕಾರ್ಮಿಕರಿಗೆ ಇರುವ ಸರಕಾರದ ಯೋಜನೆಗಳ ಬಗ್ಗೆ ಇದೆ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಕರೋನಾ ಬಂದಿರುವ ಈ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವಂತೆ, ಕಾರ್ಮಿಕ ಗರ್ಭಿಣಿಯರು ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ಮಾಡಿದರು.
ಯಾರೇ ಮಧ್ಯವರ್ತಿಗಳು ಕಾರ್ಮಿಕರಿಗೆ ವಂಚನೆ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ಅಂತಹ ಯಾವುದೇ ಕಿರುಕುಳ ಎದುರಾದರೆ ತಮ್ಮ ಗಮನಕ್ಕೆ ತರಬೇಕು ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದರು.
ಕೊರೊನಾ ಸೈನಿಕರಾದ ಲಕ್ಷ್ಮಿ ಬಾವಗೆ, ಗೀತಾ ಮಾಹಾಲಿಂಗಪುರ ಹಾಗೂ ಸಮಾಜ ಸೇವಕ ಪ್ರದೀಪ್ ಕುಂಚೆ ಹಾಗೂ ಇತರರು, ಕರೋನಾ ಬಾರದಂತೆ ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ತಿಳಿಸಿದರು. ಮಾಸ್ಕ, ಸ್ಯಾನಿಟೈಜರ್ ಬಳಸುವಂತೆ ಕಾರ್ಮಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಅಸಲಾಂ ಹಾಗೂ ಇತರರು ಇದ್ದರು.
Be the first to comment