‘ನರ್ಸ್ ‘ನಿಂದ ದಾವಣಗೆರೆ ‘ನರ್ವಸ್’

ವರದಿ:- ಪ್ರಕಾಶ ಮಂದಾರ ಹರಿಹರ

ಜೀಲ್ಲಾ ಸುದ್ದಿಗಳು

ದಾವಣಗೆರೆ:-ನಿನ್ನೆ ತಾನೇ ದಾವಣಗೆರೆ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೋಷಣೆ ಮಾಡಿದ 18 ಗಂಟೆ ಒಳಗೆ ನಗರದ ಭಾಷಾ ಏರಿಯಾದಲ್ಲಿ ಮೂವತ್ತೈದು ವರ್ಷದ ಮಹಿಳೆಗೆ ಕರೋನಾ ಪಾಸಿಟಿವ್ ಕಂಡುಬಂದಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪತ್ರಿಕಾಗೋಷ್ಠಿಯಲ್ಲಿ ದೃಢೀಕರಿಸಿದ್ದಾರೆ .

ಈ ಮಹಿಳೆಯು ಕೇಸ್ ನಂಬರ್ 533 ಆಗಿದ್ದು ಇವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಕಳೆದ ಎರಡು ದಿನದ ಹಿಂದೆ ಒಂದು ಮಹಿಳೆಯ ಹೆರಿಗೆಯನ್ನು ಸಹ ಮಾಡಿಸಿದ್ದಾರೆ.

ಮಹಿಳೆಯನ್ನು ಹೆರಿಗೆ ಮಾಡಿಸಿದ ನಂತರ ಮೈ ಕೈ ನೋವು ಎಂದು ದಾವಣಗೆರೆಯ ಆಸ್ಪತ್ರೆಗೆ ದಾಖಲಾಗಿದ್ದರು .

ಇವರ ಗಂಟಲು ದ್ರವವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ .

ಶಿವಮೊಗ್ಗ ಲ್ಯಾಬ್ ಮತ್ತು ಪುಣೆ ಲ್ಯಾಬ್ ನಲ್ಲಿ ಮಹಿಳೆಗೆ ಕರೊನಾ ಹರಡಿರುವುದು ದೃಢೀಕರಿಸಿದ್ದಾರೆ .

ಈಗಾಗಲೇ ಮಹಿಳೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಪ್ಪತ್ತು ಜನರನ್ನು ಗುರುತಿಸಲಾಗಿದೆ .ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಹಚ್ಚಿದರೆ ಇನ್ನಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಬಹುದೆ .?ಎಂಬ ಅನುಮಾನ ಕಾಡುತ್ತಿದೆ .

ಹೋದೆಯ ಮಾರಿ ಎಂದರೆ ಮತ್ತೆ ಬಂದು ವಕ್ಕರಿಸಿವೆ ಎನ್ನುವಂತಾಗಿದೆ .ಇಷ್ಟು ದಿನ ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದ ಅಧಿಕಾರಿಗಳ ಶ್ರಮವೆಲ್ಲ ಸಮುದ್ರದಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿ .

ಹಸಿರು ವಲಯಕ್ಕೆ ಪ್ರವೇಶ ಪಟ್ಟೆವು ಎಂದು ಮೈಮರೆಯುವಂತಿಲ್ಲ ಎಂದು ಹೇಳಿದ ಹದಿನೆಂಟು ತಾಸಿನ ಒಳಗೆ ಕರೋನಾ ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯಲ್ಲಿ ,ಜಿಲ್ಲೆಯ ಜನತೆಯಲ್ಲಿ ಒಂದು ರೀತಿಯಲ್ಲಿ ಕರೋನಾ ವೈರಸ್ ನ ಆತಂಕವನ್ನು ಮನೆ ಮಾಡಿದೆ .

ಜಿಲ್ಲೆಯ ಅಧಿಕಾರಿಗಳು ಮತ್ತೆ ಕೆಳ ಹಂತದಿಂದ ಕರೋನಾ ವೈರಸ್ ನಿಯಂತ್ರಣದ ಕುರಿತು ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ .

ಜಿಲ್ಲೆಯಲ್ಲಿ ಈ ಕರೋನಾ ವೈರಸ್ ಹರಡುವಿಕೆ ಮತ್ತು ಅದರ ನಿಯಂತ್ರಣದ ಜವಾಬ್ದಾರಿ ಹೆಚ್ಚಿದೆ .ಜನಸಾಮಾನ್ಯರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಕಾಪಾಡಿ ಕರೋನಾ ವೈರಸ್ ನಿಯಂತ್ರಣದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಿ ನಡೆದರೆ ಅವರ ಮನೆ ಅವರ ಕುಟುಂಬ ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ ಸಾಧ್ಯವಾದಷ್ಟು ಜಿಲ್ಲೆಯ ಜನರು ಸಾಮಾಜಿಕ ಅಂತರದ ಜೊತೆ ಮಾಸ್ಕನ್ನು ಕಡ್ಡಾಯವಾಗಿ ಬಳಸಿದರೆ ಒಳ್ಳೆಯದು ಎಂಬುದು ನಮ್ಮ ಪತ್ರಿಕೆಯ ಕಳಕಳಿಯಾಗಿದೆ .

Be the first to comment

Leave a Reply

Your email address will not be published.


*