ಜೀಲ್ಲಾ ಸುದ್ದಿಗಳು
ಬೀದರ್, (ಅಂಬಿಗ ನ್ಯೂಸ್ )29, ಕೋವಿಡ-19 ಕೊರೊನಾ ಮಹಾಮಾರಿ ವೈರಸ್ ತಡೆಗಟ್ಟುವ ಉದ್ದೇಶದಿಂದ ದೇಶದಾದ್ಯಂತ ಲಾಕ್‍ಡೌನ್ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯ ನಾಯಕರು ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರ ನಿರ್ದೇಶನದ ಮೇರೆಗೆ ನಗರಸಭೆ ವಾರ್ಡ 17ರ ಮಾಜಿ ಸದಸ್ಯರಾದ ಫರ್ನಾಂಡೀಸ್ ಹಿಪ್ಪಳಗಾಂವ ಅವರ ನೇತೃತ್ವದಲ್ಲಿ ನಗರದ ಡಿ. ದೇವರಾಜ ಅರಸ್ ಕಾಲೋನಿಯ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ದಿನಗೂಲಿಗಳು ಸೇರಿ ಸರ್ವ ಸಮಾಜದ ಜನರ ಮನೆ ಮನೆಗೆ ತೆರಳಿ ದಿನಸಿ ಸಾಮಾಗ್ರಿಗಳ ಆಹಾರ ಧಾನ್ಯದ ಕಿಟ್ ಬುಧವಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫರ್ನಾಂಡೀಸ್ ಹಿಪ್ಪಳಗಾಂವ ಅವರು ಮಾತನಾಡುತ್ತ, ಜನನಾಯಕ ಸೂರ್ಯಕಾಂತ ನಾಗಮಾರಪಳ್ಳಿ ಅವರ ಆದೇಶದಂತೆ ನಗರಸಭೆ ವಾರ್ಡ 14ರ ಎಲ್ಲ ಸಮುದಾಯದ ಬಡ ಜನರು ಹಸಿನಿಂದ ಬಳಲುಬಾರದು ಎಂಬ ಸದ್ದುದ್ದೇಶದಿಂದ ಅಕ್ಕಿ, ಸಿಹಿ ಎಣ್ಣೆ, ತೋಗರಿ ಬೇಳೆ ಮತ್ತು ಉಪ್ಪು ಸೇರಿದಂತೆ ಇತರೆ ದಿನಸಿ ಸಾಮಾಗ್ರಿಗಳ ಆಹಾರದ ಧಾನ್ಯದ ಕಿಟ್ ಮನೆ ಮನೆಗೆ ತೇರಳಿ ವಿತರಣೆ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಅನೀಲ ಭವಾನಿ, ದಿಲೀಪಕುಮಾರ ಗುಪ್ತಾ, ವೀರಶೆಟ್ಟಿ ಪಾಟೀಲ, ರೋಹಿತ ಮೇತ್ರೆ, ಪ್ರದೀಪ ಹೆಗಡೆ, ಶಿವರಾಜ ಮೇತ್ರೆ, ಬಂಡೆಪ್ಪ ಮಾನಕಾರಿ, ಸುನೀಲಕುಮಾರ ಡೋಂಗರಗಿ ಸೇರಿದಂತೆ ಡಿ. ದೇವರಾಜ ಅರಸ ಕಾಲೋನಿಯ ಪ್ರಮುಖರು ಇದ್ದರು.
Be the first to comment