ಅಂಗನವಾಡಿ ಕೇಂದ್ರದ ಬಳಿ:ಬಲಿಗಾಗಿ ಬಾಯ್ತೆರೆದಿರುವ ಬಾವಿ ಮುಚ್ಚಿಸಿ,ನೈಮ೯ಲ್ಯತೆ ಕಾಪಾಡಿ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡು ಮುಣುಗು,ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ. ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಹೊಂದಿಕೊಂಡಂತೆ ಪಾಳುಬಾವಿಯೊಂದು ಇದೆ,ಅದು ತುಂಬಾ ವಷ೯ಗಳಿಂದ ಪಾಳುಬಿದ್ದಿದೆ. ಕಸ ತ್ಯಾಜ್ಯ ಮಣ್ಣಿನಿಂದ ಕೂಡಿದೆ, ಬಾವಿ ಈಗ ಅನುಪಯುಕ್ತವಾಗಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಹಾಗೂ ಗ್ರಾಮದ ಇತರೆ ಮಕ್ಕಳು,ಆಕಸ್ಮಿಕವಾಗಿ ಕೇಂದ್ರಕ್ಕೆ ಹೊಂದಿಕೊಂಡಿರುವ ಬಾವಿಯಬಳಿ ಹೋಗಲೂಬಹುದಾಗಿದೆ. ಹಾಗೊಮ್ಮೆ ಆಟವಾಡುತ್ತಾ ಬಾವಿಯ ಬಳಿ ಮಕ್ಕಳು ಹೋದರೆ,ಬಾಯ್ತೆರೆದು ಬಲಿಗಾಗಿ ಕಾದು ಕುಳಿತಂತೆ ಹಾಳು ಬಾವಿಯಿಂದ ಭಾಸವಾಗುತ್ತಿದೆ.ಮಕ್ಕಳು ಆಡುತ್ತಾ ಆಡುತ್ತಾ ಮೈಮರೆತರೆ ಹಾಳು ಬಾವಿಗೆ ಬೀಳೊ ಸಾಧ್ಯತೆ ಇದೆ.ಮಕ್ಕಳಿಗೆ ಆ ಪಾಳು ಬಾವಿ ಎಂದೆಂದಿಗೂ ಮಾರಕವೇ ಆಗಿದೆ.ಕಾರಣ ಶೀಘ್ರವೇ ಅನುಪಯುಕ್ತ ಹಾಳು ಬಾವಿಯನ್ನು ಗ್ರಾಪಂ ಅಧಿಕಾರಿಗಳು ಶೀಘ್ರವೇ ಮುಚ್ಚಿಸಬೇಕಿದೆ.

ಅಂಗನವಾಡಿಕೇಂದ್ರದ ಸುತ್ತ ಬೆಳೆದಿರುವ ಮುಳ್ಳುಗಿಡಗಳು ಮಕ್ಕಳಿಗೆ ತೀರಾ ಅಪಾಯಕರವಾಗಿವೆ. ಕೇಂದ್ರದ ಸುತ್ತ ನೈಮ೯ಲ್ಯ ಕೊರತೆ ಇದೆ.ಗುಂಡುಮುಣುಗು ಗ್ರಾಪಂ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಪಾಳು ಬಾವಿಯನ್ನು ಮುಚ್ವಿಸಬೇಕು,ಮುಳ್ಳಿನ ಗಿಡಗಳನ್ನು ತೆಗೆಸಿ,ಕೇಂದ್ರದ ಸುತ್ತಲಿನ ವಾತಾವರಣವನ್ನು ಸ್ವಚ್ಚವಾಗಿಡಬೇಕಿದೆ.ಇಲ್ಲವಾದಲ್ಲಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋ ಸಾಧ್ಯತೆ ಇದೆ.ಕಾರಣ ಶೀಘ್ರವೇ ಪಾಳುಬಾವಿಯನ್ನು ಮುಚ್ಚಿಸಬೇಕು,ಮುಳ್ಳಿನ ಗಿಡಗಳನ್ನು ತೆರವುಗೊಳಿಸಬೇಕು,‌ಅಂಗನವಾಡಿ ಕೇಂದ್ರದ ಸುತ್ತ ಸ್ವಚ್ಚತೆ ಕಾಪಾಡುವಂತೆ ಗುಂಡುಮುಣುಗು ಗ್ರಾಪಂ ಅಧಿಕಾರಿಗೆ,ಸಿದ್ದಾಪುರ ಗ್ರಾಮಸ್ಥರು ಹಾಗೂ ಅಂಗನವಾಡಿ ಮಕ್ಕಳ ಪೋಷಕರು,ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. ನಿಲ೯ಕ್ಷಿಸಿದ್ದಲ್ಲಿ ಮಕ್ಕಳು ಭವಿಷ್ಯದಲ್ಲಿ ಪ್ರಸ್ಥಾಪಿಸಿರುವ ವಿಷಯಗಳಿಂದ,ಆಗಬಹುದಾದ ಅಹಿತಕರ ಘಟನೆಗಳಿಗೆ ಮತ್ತು ಅನಾರೋಗ್ಯಕ್ಕೆ ಅಥವಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆ.ಗ್ರಾಪಂ ಅಧಿಕಾರಿಗಳೇ ಹೊಣೆ ಎಂದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*