ಬೀದರ್,(ಅಂಬಿಗ ನ್ಯೂಸ್ ) ಇಡೀ ಜಗತ್ತಿನ ಮುಕ್ಕಾಲು ಭಾಗದಲ್ಲಿ ಅಧ್ಯಾತ್ಮದ ತಿರುಳು ಬಿತ್ತುತ್ತಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಈಗ ಆರ್ಥಿಕ ನೆರವು ನೀಡುವ ಮೂಲಕ ಮಹಾಮಾರಿ ಕೋವಿಡ್-19 ಹೊಡೆದೂಡಲು ಸಹಾಯ ಹಸ್ತಕ್ಕೆ ಮುಂದಾಗಿದೆ.
ಕಿಲ್ಲರ್ ಕೋರೋನಾದಿಂದ ಇಡೀ ವಿಶ್ವವೇ ನಲುಗಿ ಹೋಗಿದ್ದು, ಭಾರತವೂ ಸಹ ಇದಕ್ಕೆ ಹೊರತಾಗಿಲ್ಲ. ಈ ದೇಶದಲ್ಲಿ ವಿಶಾಲ ಸಂವಿಧಾನ, ಲಿಖಿತ ಕಾನೂನುಗಳ ಮಧ್ಯೆ ಸಂಸ್ಕೃತಿ, ಸಂಪ್ರದಾಯಗಳೆಂಬ ಬೇರು ಆಳವಾಗಿದುದಲ್ಲದೇ, ದೈವತ್ವವನ್ನು ಕಾನೂನಿಗಿಂತಲೂ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಕಾಣುವ ನೆಲ ಇದಾಗಿದೆ. ಅಧ್ಯಾತ್ಮ, ಯೋಗ, ರಾಜಯೋಗ, ಪ್ರಾಣಾಯಾಮದಂತಹ ದೈಹಿಕ, ಪ್ರಾರ್ಥನೆ, ಭಜನೆ, ಕೀರ್ತನೆ, ಪುರಾಣ, ಪ್ರವಚನಗಳಂತಹ ಧಾರ್ಮಿಕ ಚಟುವಟಿಕೆಗಳು ದಿನಂಪ್ರತಿ ಇಲ್ಲಿ ನಡೆಯುವುದರಿಂದಲೇ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿ ಕೋವಿಡ-19ರ ಕೇಸ್‍ಗಳು ಮತ್ತು ಸಾವಿನ ಪ್ರಮಾಣ ಬಹು ವೀರಳ.
ಇದರ ಹಿಂದೆ ಯಾವುದೋ ಒಂದು ಅಧ್ಬುತ ಶಕ್ತಿಯಾದ ಅಧ್ಯಾತ್ಮ ಕೆಲಸ ಮಾಡುತ್ತಿದೆ ಎಂಬುದು ಜಗತ್ತಿನ ಬಹುತೇಕ ರಾಷ್ಡ್ರಗಳಿಗೆ ತಿಳಿದಿದೆ.
ಇಲ್ಲಿ ತಯ್ಯಾರಾಗುವ ಹೈಡ್ರಾಕ್ಷಿಕ್ಲೋರೋಕ್ವಿನ್ ಮಾತ್ರೆಗಾಗಿ ಇಡೀ ಜಗತ್ತು ಭಾರತದ ಮುಂದೆ ಅಂಗಾಲಾಚಿರುವುದು ಅಭಿಮಾನದ ಸಂಗತಿ.
ಸತ್ಯಯುಗದಿಂದ ಹಿಡಿದು ಕಲಿಯುಗದ ವರೆಗೂ ಅನೇಕ ಹಂತಗಳಲ್ಲಿ ಸತ್ಯವನ್ನು ಜೀವಂತವಾಗಿರಿಸುವ, ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತ ಬರುತ್ತಿರುವ ಹಲವು ಧಾರ್ಮಿಕ ಹಾಗೂ ಅಧ್ಯಾತ್ಮ ಸಂಸ್ಥೆಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲಿ ಗುರ್ತಿಸಿಕೊಂಡು ಬಂದು, ಪ್ರಸ್ತುತ ಜಗತ್ತಿನ ಸುಮಾರು 142 ದೇಶಗಳಲ್ಲಿ ಅಧ್ಯಾತ್ಮದ ರಸದೌತಣ ಉಣಬಡಿಸುತ್ತಿರುವ ಕೇಂದ್ರ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವಾಗಿದೆ.
ಈ ಕೇಂದ್ರ ಪ್ರತಿ ದಿನ ಲಕ್ಷಾವಧಿ ಮನುಷ್ಯಾತ್ಮಗಳಿಗೆ ರಾಜಯೋಗ ಶಿಬಿರದ ಮುಖೇನ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುತ್ತಿದೆ. ನೆಮ್ಮದಿ ಕಳೆದುಕೊಂಡ ಅದೆಷ್ಟೋ ಮಾನವರಿಗೆ ಮಾನಸಿಕವಾಗಿ ಬಲಿಷ್ಟರಾಗಿ ಮಾಡುತ್ತಿದೆ. ಮೌಲ್ವಿಕ, ನೈತಿಕ ಹಾಗೂ ಪಾರಮಾರ್ಥಿಕ ಸತ್ಯವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿರುವ ಬ್ರಹ್ಮಾಕುಮಾರಿ ಕೇಂದ್ರಗಳು ಈಗ ಮಹಾಮಾರಿ ಕೋರೋನಾ ವೈರಾಣುವನು ಹೊಡೆದೂಡಿಸಲು ಉಭಯ ಸರ್ಕಾರಗಳ ಕೈ ಬಲಿಪಡಿಸಲು ಮುಂದಾಗಿವೆ.
ಹಾಗೇ ರಾಜ್ಯದ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನ ಜನವಾಡಾ ರಸ್ತೆಯಲ್ಲಿನ ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಹೋದರಿಯರು ಮುಖ್ಯಮಂತ್ರಿಗಳ ಪರಿಹಾರ ಕೋವಿಡ-19 ನಿಧಿಗೆ 2 ಲಕ್ಷ ದೇಣಿಗೆ ನೀಡಿದ್ದಾರೆ.
ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹಾದೇವ ಅವರ ಮುಖಾಂತರ ರು.2 ಲಕ್ಷದ ಚೆಕ್ ದೇಣಿಗೆ ರೂಪದಲ್ಲಿ ವಿತರಿಸಿದರು.
ಕೇಂದ್ರದ ಪ್ರವರ್ತಿಕಿಯರಾದ ಬಿ.ಕೆ ಗುರುದೇವಿ, ಬಿ.ಕೆ ವಿಜಯಲಕ್ಷ್ಮೀ ಹಾಗೂ ಬಿ.ಕೆ ಅನಿತಾ ಈ ಪೂಣ್ಯ ಕಾರ್ಯಕ್ಕೆ ಸಾಥ ನೀಡಿದರು.
ಸರ್ಕಾರದ ಒಂದು ನಯಾ ಪೈಸೆ ಪಡೆದುಕೊಳ್ಳದ, ಯಾವುದೇ ಸಂಸ್ಥೆಗಳಿಂದ ಸಹಾಯ ಗಿಟ್ಟಿಸದ, ಯಾರೋಬ್ಬ ದಾನಿಗಳ ಮುಂದೆ ಕೈ ಚಾಚದೇ ಜಾತಿ, ಧರ್ಮ, ಪಂಥ, ಪಂಗಡ, ಉಚ್ಛ, ನೀಚ, ಬಡವ, ಶ್ರೀಮಂತವೆಂಬ ಭೇದ ಏಣಿಸದೇ, ಎಲ್ಲರನ್ನು ಒಂದೇ ರೀತಿ ಕಾಣುವ, ಆಡಂಬರದ ಪಾಶಕ್ಕೆ ಧಿಕ್ಕರಿಸಿ, ಸರಳತೆಯನ್ನು ನಿಜ ಜೀವನದಲ್ಲಿ ಆಚರಿಸಿ, ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಎಂಬ ವಾಕ್ಯ ಗಟ್ಟಿಯಾಗಿ ಪ್ರತಿಪಾದಿಸುವ ಕೇಂದ್ರವಿದು.
ಹಸಿದು ಬರುವ ಸಹಸ್ರಾರು ಆತ್ಮಗಳಿಗೆ ಅನ್ನದಾನ ಹಾಗೂ ಜ್ಞಾನದಾನ ಎರಡನ್ನು ಸಮಾನವಾಗಿ ಹಂಚುತ್ತಿರುವ ಅಪರೂಪದ ಕೇಂದ್ರವೇ ಬ್ರಹ್ಮಾಕುಮಾರಿ ಕೇಂದ್ರವೆಂದರೂ ತಪ್ಪಾಗಲಾರದು.
Be the first to comment