ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ಹೌದು ದೇಶಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು, ಈ ಬಂದ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಚಿಕ್ಕ ಹೆಬ್ಬಾಳ ಅಂಗನವಾಡಿ ಕೇಂದ್ರದಿಂದ ಇಂದು ಗರ್ಭಿಣಿಯರು, ಮಕ್ಕಳು, ಮತ್ತು ಬಾಣಂತಿಯರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣದಿಂದ ಕೊರೊನಾ ವೈರಸ್ ಸೋಂಕು ಬಹುಬೇಗ ಹರಡುವುದರಿಂದ ಫಲಾನುಭವಿಗಳನ್ನು ಅಂಗನವಾಡಿ ಕೇಂದ್ರಕ್ಕೆ
ಕರೆತರದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ನೀಡಲಾಗಿರುವ ಕಿಟ್ ನ್ನು ಒಳಗೊಂಡಿರುವ ದೀನಸಿಗಳನ್ನು ಒಂದು ತಳ್ಳುವ ಬಂಡಿಯಲ್ಲಿ ತುಂಬಿಕೊಂಡು ಅಂಗನವಾಡಿ ಕಾರ್ಯಕರ್ತೆಯರ, ಆಶಾ ಕಾರ್ಯಕರ್ತೆಯರ, ಹಾಗೂ ಆರೋಗ್ಯ ಇಲಾಖೆಯವರ ಸಮ್ಮುಖದಲ್ಲಿ ಫಲಾನುಭವಿಗಳ ಪ್ರತಿ ಮನೆ ಮನೆಗಳಿಗೆ ತೆರಳಿ ನೀಡಲಾಯಿತು.
ಇನ್ನೂ ಫುಡ್ ಕಿಟ್ ಗಳನ್ನೊಳಗೊಂಡ ಊಟದ ಆಹಾರ ಧಾನ್ಯಗಳಾದ 6 ತಿಂಗಳಿಂದ 6 ವರ್ಷ ದ ಮಕ್ಕಳೂ ಮತ್ತು ಗರ್ಬಿಣಿ ಬಾಣಂತಿಯರಿಗೆ ನೀಡಲಾಗುವ ಅಕ್ಕಿ, ಬೆಳೆ, ಬೆಲ್ಲ, ಸಕ್ಕರೆ, ಸೆಂಗಾ, ಮತ್ತು ಹೆಸರು ಕಾಳು, ನ್ಯುಟ್ರಿ ಮಿಕ್ಸ್ ಸೇರಿದಂತೆ ಮಸಾಲ, ಎಣ್ಣೆ, ಸಾಸಿವೆ, ಜೀರಿಗೆ ಎಲ್ಲಾ ಪೌಷ್ಠಿಕ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕರಾದ ಶ್ರೀನಾಥ ಹೂಗಾರ, ಅಂಗನವಾಡಿ ಕಾರ್ಯಕರ್ತೆ ಗುರುಬಾಯಿ ಹಿರೇಮಠ, ಆಶಾ ಕಾರ್ಯಕರ್ತೆ ಕಸ್ತೂರಿಬಾಯಿ ಹೂಗಾರ, ಸಹಾಯಕಿ ನಯನಾ, ಹಾಗೂ ಊರಿನ ಪ್ರಮುಖರಾದ ತಿಪ್ಪರಡ್ಡಿ ಮಲ್ಕಾಪುರ ಯುವಕರಾದ ತಿರುಪತಿ ದೊರೆ, ಅಮರೇಶ ರಾಗೇರಿ, ನೀಲಕಂಠಾಯ ವಿಶ್ವಕರ್ಮ ಉಪಸ್ಥಿತರಿದ್ದರು.
Be the first to comment