ಕೇಂದ್ರ ಸರ್ಕಾರದಿಂದ ಮಾನ್ಯತೆ ಹೊಂದಿರುವ ಎಲ್ಲಾ ಸಣ್ಣ ಪತ್ರಿಕೆಗಳು, ನೊಂದಾಯಿತ ಆನ ಲೈನ ಮಿಡಿಯಾ ವಾಹಿನಿಗಳ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ: ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯ ಮಂಡಳಿಯ ಸದಸ್ಯ ಬಸವರಾಜು ಆಗ್ರಹ

ಜೀಲ್ಲಾ ಸುದ್ದಿಗಳು

ಬೆಳಗಾವಿ:- ಕರೋನಾ ವೈರಸ್ ತಡೆಗಟ್ಟುವುದಕ್ಕೆ, ಹಾಗೂ ಜಾಗೃತಿ ಮೂಡಿಸುವುದಕ್ಕೆ ಪತ್ರಕರ್ತರ ಪಾತ್ರ ಅತಿ ಪ್ರಮುಖವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಜಾಗೃತಿ ಮೂಡಿಸುವುದು ಹಾಗೂ ನೊಂದ ಜನರು, ನಷ್ಟಕ್ಕೆ ಒಳಗಾದ ರೈತರ ಪರ ಧ್ವನಿ ಎತ್ತಿ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತೆಗೆದುಕೊಂಡು ಬಂದು ಸಮಸ್ಯೆಗಳನ್ನು ಬಗೆಹರಿಸುತ್ತಿರುವುದು ಗ್ರಾಮೀಣ ಪ್ರದೇಶಗಳ ಪತ್ರಕರ್ತರು.

?️ತನ್ನ ಜೀವನದ ಆರೋಗ್ಯ ಹಾಗೂ ಕುಟುಂಬದ ಹಿತಾಸಕ್ತಿಯನ್ನು ಲೆಕ್ಕಿಸದೇ ಕೆಲಸ ಮಾಡುತ್ತಿರುವ ವಾರಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಗಳು, ನೊಂದಾಯಿತ ಆನಲೈನ್ ಮಿಡಿಯಾ ಸುದ್ದಿಗಳ ವರದಿಗಾರರು, ದೈನಂದಿನ ಪತ್ರಿಕೆಗಳ ಅರೆಕಾಲಿಕ ವರದಿಗಾರರು, ಕ್ಯಾಮರಾ ಮೆನ್ ಗಳು ಈಗಿನ ಸಂದರ್ಭದಲ್ಲಿ ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಕುಟುಂಬ ನಿರ್ವಹಣೆಗೂ ಕಷ್ಟ ಪಡುತ್ತಿದ್ದು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ . ಸರ್ಕಾರದ ಸೌಲಭ್ಯಗಳಂತೂ ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಪತ್ರಕರ್ತರಿಗೆ ಮಾತ್ರ ಸೀಮಿತವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಪತ್ರಕರ್ತರಿಗೆ ಯಾರು ಸಹ ನೆರವಿನ ಹಸ್ತ ಚಾಚಲು ಮುಂದೆ ಬರುತ್ತಿಲ್ಲಾ. ಈಗಿರುವಾಗ ಇಂತಹ ಗ್ರಾಮೀಣ ಪ್ರದೇಶಗಳ ಎಲ್ಲಾ ಆಯಾಮಗಳ ಪತ್ರಕರ್ತರ ಪ್ರಸ್ತುತ ಜೀವನ ನಿರ್ವಹಣೆಯಂತೂ ತುಂಬಾನೇ ಕಠಿಣವಾಗಿದೆ. ಆದ್ದರಿಂದ ಇನ್ನಾದರೂ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜುರವರು ರಾಜ್ಯಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳಿಗೆ, ರಾಜ್ಯದಲ್ಲಿರುವ ಗ್ರಾಮೀಣ ಪ್ರದೇಶಗಳ ಪತ್ರಕರ್ತರ ಪರವಾಗಿ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿಕೊಂಡರು.

Be the first to comment

Leave a Reply

Your email address will not be published.


*