ಜೀಲ್ಲಾ ಸುದ್ದಿಗಳು
ಬೀದರ್, ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ ಅವರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಇಲ್ಲಿಯ ವಾರ್ಡ್ ಸಂಖ್ಯೆ 34 ರ ವ್ಯಾಪ್ತಿಯ ವಿವಿಧ ಕಾಲೊನಿಗಳ ಒಂದು ಸಾವಿರ ಬಡ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಪಕ್ಕಲವಾಡ, ಬೆಥೆನಿ ಕಾಲೊನಿ, ಗುಲ್ಶನ್ ಬಾಗ್, ಫಕೀರ್ ತಕಿಯಾ, ಎಡೆನ್ ಕಾಲೊನಿ, ಗರೀಬ್ ಕಾಲೊನಿ ಹಾಗೂ ಈಡಿಗೇರಿಯ ಅನಾಥ, ನಿರ್ಗತಿಕ, ವಿಧವೆ, ಅಂಗವಿಕಲ, ಕೂಲಿ ಕಾರ್ಮಿಕ ಹಾಗೂ ಬಡ ಕುಟುಂಬಗಳಿಗೆ ತಲಾ ನಾಲ್ಕು ಕೆ.ಜಿ. ಅಕ್ಕಿ, ಮೂರು ಕೆ.ಜಿ. ಗೋಧಿ, ಒಂದು ಕೆ.ಜಿ. ತೊಗರಿ ಬೇಳೆ, ಒಂದು ಕೆ.ಜಿ. ಸಿಹಿ ಎಣ್ಣೆ, ಅರ್ಧ ಕೆ.ಜಿ. ಸಕ್ಕರೆ, ಖಾರ, ಉಪ್ಪು ಒಳಗೊಂಡ ಕಿಟ್ ವಿತರಿಸಿದರು.
ಕೊರೊನಾ ಸೋಂಕಿನ ಕಾರಣ ಇಡೀ ದೇಶ ಲಾಕ್‍ಡೌನ್ ಆಗಿರುವ ಪ್ರಯುಕ್ತ ಬದುಕು ಸಾಗಿಸಲು ನಿತ್ಯದ ಕೂಲಿಯನ್ನೇ ಅವಲಂಬಿಸಿರುವ ಅಸಂಖ್ಯಾತ ಕುಟುಂಬಗಳು ತೊಂದರೆಗೆ ಒಳಗಾಗಿವೆ.
ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲೂ ಆಗದ, ಅರಗಿಸಿಕೊಳ್ಳಲೂ ಆಗದ ಸ್ಥಿತಿಯಲ್ಲಿ ಇವೆ. ಅಂಥ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಿ ಕೈಲಾದ ನೆರವು ಒದಗಿಸಿದ್ದೇನೆ ಎಂದು ಫಿಲೋಮನ್‍ರಾಜ್ ಪ್ರಸಾದ್ ತಿಳಿಸಿದರು.
ಅನ್ನದಾಸೋಹ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಸ್ಥಿತಿವಂತರು ಅನ್ನ ದಾಸೋಹ ಮಾಡಬೇಕು. ಲಾಕ್‍ಡೌನ್‍ನಿಂದಾಗಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಈಡಿಗೇರಿಯಲ್ಲಿ ಆಹಾರಧಾನ್ಯ ಕಿಟ್‍ಗಳ ಉಚಿತ ವಿತರಣೆಗೆ ಚಾಲನೆ ನೀಡಿದ ಡಿವೈಎಸ್‍ಪಿ ಬಸವೇಶ್ವರ ಹೀರಾ ಅವರು, ಫೀಲೋಮನ್‍ರಾಜ್ ಪ್ರಸಾದ ಅವರ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರ್ಕೇಟ್ ಠಾಣೆಯ ಪಿಎಸ್‍ಐ ಎಸ್. ಸಂಗೀತಾ, ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ಸಭಾಪಾಲಕ ಎಂ. ಜಾರ್ಜ್, ಪಾಸ್ಟರ್ ಉದಯಕುಮಾರ,
ಬಿ.ಕೆ. ಸುಂದರರಾಜ, ಸಂಜಯ ಜೆಸ್ಸಿ, ಪ್ರವೀಣಕುಮಾರ ವಸಂತರಾಜ, ಸುಂದರರಾಜ ಮಾಳೆಗಾಂವ, ಯಶವಂತ ಮಾಣಿಕ, ವಿಜಯಕುಮಾರ ಗುಮ್ಮಾ, ಉದಯಕುಮಾರ, ಸುಭಾಷ, ಕ್ಲೆಮೆಂಟ್‍ರಾಜ್, ಡ್ಯಾನಿಯಲ್, ಪ್ರೇಮ್ ಇದ್ದರು.
Be the first to comment