ಹಣಕ್ಕಿಂತ ಮಾನವೀಯತೆ ಮುಖ್ಯ ,ರಾಜನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಂತೇಶ್ ಹೇಳಿಕೆ .

ಜೀಲ್ಲಾ ಸುದ್ದಿಗಳು

ಹರಿಹರ:-ಕರೊನಾ ಸಂಕಷ್ಟದಿಂದ ದೇಶಾದ್ಯಂತ ಬಡ, ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸಂಕಷ್ಟಕ್ಕೆ ಒಳಗಾದ ಜನರ ನೆರವಿಗೆ ಅನೇಕ ಮಹನೀಯರು ತಮ್ಮ ಮಾನವೀಯತೆಯನ್ನು ಮರೆಯುತ್ತಿದ್ದಾರೆ .

ಯಾರೂ ಹಸಿವಿನಿಂದ ಸಾಯಬಾರದು ಎಂಬ ಸದುದ್ದೇಶದಿಂದ ತಮ್ಮ ಕೈಲಾದ ಸೇವೆಯನ್ನು ಜನ ಸಾಮಾನ್ಯರಿಗೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಹಾರದ ಕಿಟ್ ನ್ನು ಹಾಗೂ ಇತರ ದವಸಧಾನ್ಯಗಳನ್ನು ನೀಡುವದರ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರುತ್ತಿದ್ದಾರೆ.

ಇಂದು ರಾಜನಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷರಾದ ಮಹಾಂತೇಶ್ ಇವರು .ತಮ್ಮ ಪಂಚಾಯಿತಿ ತಮ್ಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು, ಹಾಗೂ ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೆ ,ಹಾಗೂ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ,ತಮ್ಮ ಮಂಡಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ, ಆಹಾರದ ಕಿಟ್ಟನ್ನು ನೀಡಿ ಸಂಕಷ್ಟದ ಸಮಯದಲ್ಲಿ ಮಾನವತೆಯ ಮುಖ್ಯ ನಾನು ಸದಾ ನಿಮ್ಮೊಂದಿಗೆ ಇದ್ದೇನೆ .ಬರೀ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪು ಮಾಡಿಕೊಳ್ಳುವುದಿಲ್ಲ ಇತರ ಸಂದರ್ಭದಲ್ಲೂ ನಿಮ್ಮ ಎಲ್ಲರಿಗೂ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇನೆ.

ಇಂತಹ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹಂಚಿಕೊಂಡು ತಿನ್ನಬೇಕು ಬದುಕಿ ಬಾಳಬೇಕು .ಮನುಷ್ಯನಿಗೆ ಹಣಕ್ಕಿಂತ ಮಾನವೀಯತೆ ದೊಡ್ಡದು ಮಾನವೀಯ ನೆಲೆಗಟ್ಟಿನ ಮೇಲೆ ಇನ್ನೊಬ್ಬರ ಕಷ್ಟವನ್ನು ಅರ್ಥ ಮಾಡಿಕೊಂಡು ಅವರಿಗೆ ನಮ್ಮ ಕೈಲಾದ ಸಹಾಯ ಹಸ್ತವನ್ನು ನೀಡಿ ನಮ್ಮ ಔದಾರ್ಯವನ್ನು ಮೆರೆಯಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು .

ರಾಜನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮಹಾಂತ್ ಶಿವರು ಈ ಹಿಂದಿನಿಂದಲೂ ತೆರೆಮರೆಯಲ್ಲಿದ್ದು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ ಈಗಲೂ ಆ ಸಮಾಜ ಸೇವೆಯನ್ನು ಮುಂದುವರಿಸಿಕೊಂಡು ಹೋಗಿದ್ದಾರೆ ಅಧಿಕಾರಕ್ಕಿಂತ ಜನರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಜನಪ್ರತಿನಿಧಿಯ ಕರ್ತವ್ಯ ಎಂಬುದನ್ನು ಇಂದು ಅವರು ಬಡ ಹಾಗೂ ಮಧ್ಯಮ ವರ್ಗದವರಿಗೆ .ತಮ್ಮ ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೆ ನೀಡುವುದರ ಮೂಲಕ ತಮ್ಮ ದೊಡ್ಡತನವನ್ನು ಇಂಥ ಸಂಕಷ್ಟದ ಸಮಯದಲ್ಲಿ ಕಷ್ಟಕ್ಕೆ ಸ್ಪಂದನೆ ಮಾಡುವುದರ ಮೂಲಕ ಇತರ ಚುನಾಯಿತ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ .

ವರದಿ.ಪ್ರಕಾಶ ಮಂದಾರ ಹರಿಹರ

Be the first to comment

Leave a Reply

Your email address will not be published.


*