ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಪಟ್ಟಣ ಸೇರಿದಂತೆ ತ‍ಾಲೂಕಿನೆಲ್ಲೆಡೆಗಳಲ್ಲಿ ಅಕ್ರಮ ಮದ್ಯ ಮಾರಾಟ,ಸಾಗಾಣಿಕೆ ಜರುಗುತ್ತಿರುವುದಾಗಿ ದೂರುಗಳು ಬಂದಿದ್ದು. ಸುಾಕ್ತಕ್ರಮಜರುಗಿಸಬೇಕೆಂದು ಶಾಸಕರಾದ ಎನ.ವೈ.ಗೋಪಾಲಕೃಷ್ಣ ರವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಅವರು ಏ 27ರಂದು ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಕೋವಿಡ್-19 ಟಾಸ್ಕ್ ಫೋರ್ಸ್ ಸಭೆ ಹಾಗೂ ಎಲ್ಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಲಾಕ್ ಡೌನ್ ನಂತಹ ತುತು೯ ಪರಿಸ್ಥಿತಿಯಲ್ಲಿಯೂ ಪೊಲೀಸರ ಕಣ್ಣು ತಪ್ಪಿಸಿ ಮದ್ಯ ಸಾಗಾಣಿಕೆ,ಮಾರಾಟ ಅಸಾಧ್ಯ.ಪೊಲಿಸ್ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಥ೯ವ್ಯ ನಿಷ್ಠೆಯಿಂದ ಕಾಯ೯ನಿವ೯ಹಿಸಿ,ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ನಿಧಾ೯ಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಅವರು ಸೂಚಿಸಿದರು.

ಬೇಸಿಗೆಯೊಂದಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರದೆ, ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮಕೈಗೊಳ್ಳುವಂತೆ ಇಲಾಖಾಧಿಕಾರಿಗೆ ಸೂಚಿಸಿದರು.

ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ಸಮಪ೯ಕವಾಗಿ ಕಾಯ೯ನಿವ೯ಹಿಸುತ್ತಿಲ್ಲ ಎಂದು ದೂರು ಕೇಳಿಬರುತ್ತಿವೆ, ಅವುಗಳ ದುರಸ್ಥಿಗೊಳಿಸುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ತಿಳಿಸಿದರು.
ತಾಲೂಕಿನಲ್ಲಿ ಹಲವು ಭಾಗಗಳಲ್ಲಿ ಮಳೆಯಾಗಿದ್ದರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮಪ೯ಪಕವಾಗಿ ಪೂರೈಕೆಗೆ ಅಗತ್ಯ ಕ್ರಮಕ್ಕಾಗಿ ಅಧಿಕಾರಿಗೆ ಸೂಚಿಸಿದರು.
ಲಾಕ್ ಡೌನ್ ನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದುವರಿಸುವುದರಿಂದ ಪೊಲೀಸ್ ಇಲಾಖೆ ಗ್ರಾಮಗಳಲ್ಲಿ ಗಸ್ತು ಚೆಕ್ ಪೋಸ್ಟ್ ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ನಿರಾಶ್ರಿತ ಕೇಂದ್ರದಲ್ಲಿರುವ ಬೇರೆ ರಾಜ್ಯಗಳ ಕಾರ್ಮಿಕರಿಗೆ ಸೂಕ್ತ ವಸತಿ ಹಾಗೂ ಆಹಾರ ವ್ಯವಸ್ಥೆಯನ್ನು ಮಾಡಲುತಿಳಿಸಿದರು.
ಎಸ್ಎಸ್ಎಲ್ ಸಿ ಮಕ್ಕಳಿಗೆ ಆನ್ ಲೈನ್ ಮೂಲಕ ತರಗತಿಗಳನ್ನು ಸೂಕ್ತರೀತಿಯಲ್ಲಿ ನಡೆಸಬೇಕೆಂದು ಬಿಇಓರವರಿಗೆ ಹೇಳಿದರು.
ಕೊರೋನಾ ವೈರಸ್ ಬಗ್ಗೆ ಸಾವ೯ಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ,ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾಯ೯ಕತ೯ರಿಗೆ ಸೂಕ್ತ ರೀತಿ ಭದ್ರತೆ ಹಾಗೂ ಅವರಿಗೆ ವಿಶೇಷ ಗೌರವಧನ ನೀಡಲು ಕ್ರಮಕ್ಕಾಗಿ ಇಲಾಖಾಧಿಕಾರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಪ್ರಕರಣಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ವಹಿಸಬೇಕಿದೆ ಮತ್ತು ಹೆಚ್ಚಾಗದಂತೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.ಈ ಕುರಿತು ನಿಗಾವಹಿಸುವಂತೆ ತಾಪಂ ಅಧಿಕಾರಿಗೆ ಹಾಗೂ ತಹಶಿಲ್ದಾರರಿಗೆ ತಿಳಿಸಿದರು.ಕೋರೋನಾ ವೈರಸ್ ನಿಯಂತ್ರಣಕ್ಕಾಗಿ,ಹಗಲಿರುಳು ಸೈನಿಕರಂತೆ ಶ್ರಮಿಸುತ್ತಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.ಕಾಡಿದ್ದರೆ ನಾಡು ಕಾಡನ್ನು ರಕ್ಷಿಸುವ ನಿಷ್ಟಾವಂತ ಅರಣ್ಯಾಧಿಕಾರಿಗಳಿಗೆ ತ‍ಾವು ಸದಾ ಸಹಕರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಕೊರೋನಾ ಹಾಗೂ ಡೆಂಗ್ಯೂ ನಿಯಂತ್ರಣಕ್ಕಾಗಿ ತಹಶಿಲ್ದಾರರು ತಮ್ಮ ವಿವೇಚನೆಯಂತೆ ಸೂಕ್ತ ಸಮಯೋಚಿತ ನಿಧಾ೯ರಗಳನ್ನು ಕೈಗೊಳ್ಳಬಹುದಾಗಿದೆ,ಅವರೊಂದಿಗೆ ಎಲ್ಲಾ ಇಲಾಖಾಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಿದರು.ತಹಶಿಲ್ದಾರರಾದ ಎಸ್.ಮಹಾಬಲೇಶ್ವರ,ತಾಪಂ ಕಾಯ೯ನಿವ೯ಹಣಾಧಿಕಾರಿ ಜಿ.ಎಂ.ಬಸಣ್ಣ,ಡಿವೈ ಎಸ್ಪಿ ಶಿವಕುಮಾರ,ಸಿಪಿಐ ಪಂಪನಗೌಡ,ಜಿ.ಪಂ ಸದಸ್ಯರಾದ ರೇವಣ್ಣ,ಕೊಟ್ರೇಶ್,ತಾಪಂ ಅಧ್ಯಕ್ಷೆ ರತ್ನಮ್ಮ,ಪಿಎಸ್ಐ ತಿಮ್ಮಣ್ಣ,ಅರಣ್ಯಾಧಿಕಾರಿ ರೇಣುಕಮ್ಮ,ಆರೋಗ್ಯಾಧಿಕಾರಿ ಷಣ್ಮುಖನಾಯ್ಕ,ಜಿಪಂ ಅಧಿಕಾರಿ ಮಾಗ೯ದಪ್ಪ,ನಾಗನಗೌಡ, ಜೆಸ್ಕಾಂನ ರಾಜೇಶ,ಬಿಇಓ ಉಮಾದೇವಿ,ಸಿಡಿಪಿಓ ಮಧುಸೂಧನ,ಕುಡಿಯುವ ನೀರು ಸರಬರಾಜು ಇಲಾಖಾಧಿಕಾರಿ ಮಂಜುನಾಥ,ಹಾಸ್ಟೇಲ್ ಮೇಲುಸ್ಥುವಾರಿ ಅಧಿಕಾರಿ ಜಗಧೀಶ,ಸೇರಿದಂತೆ ಬಹುತೇಕ ಎಲ್ಲಾ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯ್ಕ,ಬಿ.ಜೆ.ಪಿ ಮುಖಂಡರಾದ ಹೆಚ್. ವೀರನಗೌಡ,ಕೆ.ಎಂ.ತಿಪ್ಪೇಸ್ವಾಮಿ,ಬಂಗಾರು ಹನುಮಂತು,ತೊಣಸಿಗೇರಿ ಮಲ್ಲಿಕಾಜು೯ನ,ಬಿ.ಕೆ.ರಾಘವೇಂದ್ರ,ಸೂಯ೯ಪಾಪಣ್ಣ,ಶ್ರೀಮತಿ ಪವಿತ್ರಾ,ಶಾಸಕರ ಆಪ್ತ ಸಹಾಯಕ ಶ್ರೀಕಾಂತ ಸೇರಿದಂತೆ,ಜಿಪಂ,ತಾಪಂ,ಪಪಂ ಸದಸ್ಯರು.ಇತರರು ಸಭೆಯಲ್ಲಿದ್ದರು.

ಕೂಡ್ಲಿಗಿ ವರದಿ:- ವಿ ಜಿ ವೃಷಭೇಂದ್ರ

Be the first to comment

Leave a Reply

Your email address will not be published.


*