ಶಾಸಕ ರಾಜುಗೌಡರ ಸೇವಾ ಸಮಿತಿಯಿಂದ ರೇಶನ್ ಕಾರ್ಡ್ ಇಲ್ಲದ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ವಿತರಣೆ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಹುಣಸಗಿ

ದೇಶದಲ್ಲಿ ಲಾಕ್​​ಡೌನ್ ಜಾರಿಯಾದ ಬಳಿಕ ಬಡವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಅನೇಕ ಸಂಘ-ಸಂಸ್ಥೆಗಳು ಇಂಥವರ ನೆರವಿಗೆ ಧಾವಿಸಿದ್ದು, ಊಟ ದಿನಸಿ ಕಿಟ್ ವಿತರಿಸುವ ಕಾರ್ಯ ಮಾಡುತ್ತಿವೆ.

ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಬರುವ ನೂರಾರು ಕುಟುಂಬಗಳು ರೇಶನ್ ಕಾರ್ಡ್ಗಳನ್ನು ಹೊಂದಿರದ ಕಾರಣ ಬಡ ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ .

ತಾಲೂಕಿನಲ್ಲಿರುವ ಬಡ, ನಿರ್ಗತಿಕರಿಗೆ ಅಕ್ಕಿ, ಗೋಧಿ, ಜೋಳ ಮತ್ತಿತರೆ ದವಸ ಧಾನ್ಯಗಳನ್ನೊಳಗೊಂಡ ಸಾಮಗ್ರಿಗಳ ಕಿಟ್​ ಹಾಗೂ ಮಾಸ್ಕ್ ಗಳನ್ನು ರಾಜುಗೌಡ ಸೇವಾ ಸಮಿತಿಯ ಸದಸ್ಯರು ಇಂದು ಅರಕೇರಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕನ್ನೆಳ್ಳಿ, ಬೈಚಬಾಳ, ಕೂಡ್ಲಿಗಿ ಹಾಗೂ ಶಖಾಪುರ ಗ್ರಾಮಗಳಿಗೆ ತೆರಳಿ ಜನರ ಮನೆ ಬಾಗಿಲಿಗೆ ತಲುಪಿಸಿದರು.

ಶಾಸಕ ರಾಜುಗೌಡರು ತಾಲೂಕಿನ ಪ್ರತಿ ಗ್ರಾಮದಲ್ಲಿನ ಬಡ ಜನರು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಪದಾರ್ಥಗಳ ದಿನಸಿ ಕಿಟ್ ಹಾಗೂ ಊಟವನ್ನು ವಿತರಿಸಲಾಗುತ್ತಿದ್ದಾರೆ.

ಅಲ್ಲದೆ ಸುರಪುರ, ಹುಣಸಗಿ ಮತ್ತಿತರ ಕಡೆಗಳಲ್ಲಿ ನಿತ್ಯವೂ
ನೂರಾರು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ತಾಲೂಕಿನ ಜನರಿಂದ ರಾಜುಗೌಡ ಸೇವಾ ಸಮಿತಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ.

ವರದಿ:-  ಆನಂದ ಹೊಸಗೌಡರ್

Be the first to comment

Leave a Reply

Your email address will not be published.


*