ಕೋನಮೇಳಕುಂದಾ, ಧನ್ನೂರಾದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕ ಈಶ್ವರ ಖಂಡ್ರೆ

ಜೀಲ್ಲಾ ಸುದ್ದಿಗಳು

ಲಾಕ್ ಡೌನ್ ಸಂಕಷ್ಟದಲ್ಲಿರುವ ದುಡಿವ ಕೈಗಳಿಗೆ ಕನಿಷ್ಟ ೨೦೦ ದಿನ ಕೆಲಸ ನೀಡಲು ಸರಕಾರಕ್ಕೆ ಒತ್ತಾಯ

ಭಾಲ್ಕಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾದಡಿ ಒಂದು ಪರಿವಾರಕ್ಕೆ ಕನಿಷ್ಟ ೨೦೦ ದಿವಸ ಕೆಲಸ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರಾದ ಶ್ರೀ ಈಶ್ವರ ಖಂಡ್ರೆಅವರು ಒತ್ತಾಯಿಸಿದ್ದಾರೆ

ತಾಲೂಕಿನ ಕೋನ ಮೇಳಕುಂದಾ ಹಾಗೂ ಧನ್ನೂರು(ಹೆಚ್) ಗ್ರಾಮಗಳ ಹೊರ ವಲಯದಲ್ಲಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು.

ಕೋವಿಡ್ ೧೯ ತಡೆಗೆ ಸರಕಾರ ಹೊರಡಿಸುವ ಲಾಕ್ ಡೌನ್ ನಿಂದ ಕಳೆದ ೩೫ ದಿವಸಗಳಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊತ್ತಿನ ಊಟಕ್ಕೆ ತೊಂದರೆ ಅನುಭವಿಸುಂತಹ ಪರಿಸ್ಥಿತಿ ಇದೆ.

ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು, ಅಭಿಮಾನಿಗಳು ಸೇರಿ ಅಗತ್ಯ ಇರುವ ಕಡೆಗಳಲ್ಲಿ ಆಹಾರದ ಪೊಟ್ಟಣ, ತರಕಾರಿ ಕಿಟ್, ಮಾಸ್ಕ್ ಸೇರಿ ಪಡಿತರ ಹಾಗೂ ಪಡಿತರ ರಹಿತ ಫಲಾನುಭವಿಗಳಿಗೆ ಎರಡು ತಿಂಗಳ ಮುಂಗಡ ಪಡಿತರ ನೀಡುವುದು ಸೇರಿದಂತೆ ಇತ್ಯಾದಿ ಅಗತ್ಯ ಸೌಲಭ್ಯ ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು

ಲಾಕ್ ಡೌನ್ ನಿಂದ ಕೆಲಸ ಕಳೆದು ಕೊಂಡು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ದುಡಿವ ಕೈಗಳಿಗೆ ಕೆಲಸ ಕೊಡಬೇಕು ಎನ್ನುವ ಉದ್ದೇಶದಿಂದ ಅಧಿಕಾರಿಗಳಿಗೆ ಸೂಚಿಸಿ ನರೇಗಾದಡಿ ಕೆಲಸ ಆರಂಭಿಸಲಾಗಿದೆ. ಎಲ್ಲ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಮಾರೋಪಾದಿಯಲ್ಲಿ ಕೂಲಿ ಕಾರ್ಮಿಕರಿಗೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ

ಆದರೆ, ಸಧ್ಯಕ್ಕೆ ಒಂದು ಪರಿವಾರಕ್ಕೆ ಕೇವಲ ೧೦೦ ದಿವಸ ಕೂಲಿ ಕೆಲಸ ನೀಡಲಾಗುತ್ತಿದ್ದು, ಇದು ಯಾವುದಕ್ಕೂ ಸಾಲುವುದಿಲ್ಲ. ಇಂತಹ ಸಂಕಷ್ಟ ಸಮಯದಲ್ಲಿ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಕನಿಷ್ಟ ೨೦೦ ದಿನವಾದರೂ ನರೇಗಾದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ

ಈ ಸಂದರ್ಭದಲ್ಲಿ ತಹಸೀಲ್ದಾರ ಅಣ್ಣಾರಾವ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ, ಅಭಿವೃದ್ಧಿ ಅಧಿಕಾರಿ ಗೋದಾವರಿ ಬಿರಾದಾರ್, ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಬಿರಾದಾರ್, ಶಿವರಾಜ ಹಾಸನಕರ್, ಗುಂಡೇರಾವ ಪಾಟೀಲ್, ಎಪಿಎಂಸಿ ಅಧ್ಯಕ್ಷ ಬಾಬುರಾವ ಪೊಲೀಸ್ ಪಾಟೀಲ್ ಸೇರಿದಂತೆ ಹಲವರು ಇದ್ದರು.

ವರದಿ…ಚಂದ್ರಕಾಂತ ಹಳ್ಳಿಖೇಡಕರ ಬೀದರ್

Be the first to comment

Leave a Reply

Your email address will not be published.


*