ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ
ಇಡೀ ರಾಜ್ಯಾದ್ಯಂತ ತಲ್ಲಣ ಮೂಡಿಸಿದ ಯಾದಗಿರಿ ಜಿಲ್ಲೆಯ ವ್ಯಕ್ತಿ ಕಲಬುರಗಿ ಜಿಲ್ಲೆಯ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನುವ ವಿಷಯದಿಂದ ಇಡೀ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದರು ಆದರೆ ಇಂದು ಆ ಎಲ್ಲಾ ಆತಂಕಗಳಿಗೆ ಬ್ರೇಕ್ ಬಿದ್ದಿದೆ.
ಹೌದು ಯಾವುದೇ ಕಾರಣಕ್ಕೂ ಜನತೆಯಲ್ಲಿ ಆತಂಕ ಬೇಡ, ಕಲಬುರಗಿಯ ಸೋಂಕಿತನೊಂದಿಗೆ (ಪಿ-413) ಪ್ರಾಥಮಿಕ ಸಂಪರ್ಕ ಹೊಂದಿದ್ದ, ಯಾದಗಿರಿಯಲ್ಲಿ ಆಪ್ಟಿಕಲ್ಸ್ ಅಂಗಡಿ ಹೊಂದಿರುವ ವ್ಯಕ್ತಿಯ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ.
ಆಪ್ಟಿಕಲ್ಸ್ ಅಂಗಡಿಯ ಸದರಿ ವ್ಯಕ್ತಿಯ ಹೆಸರು ಹಾಗೂ ಪಿ-413 ಸಂಬಂಧಿಯ (ಪಿ-445) ಹೆಸರು ಬಹುತೇಕ ಒಂದೇ ಆಗಿರುವುದರಿಂದ ಗೊಂದಲ ಸೃಷ್ಟಿಯಾಗಿದೆ.
ಆಪ್ಟಿಕಲ್ಸ್ ಅಂಗಡಿಯಾತನ ಜೊತೆ ದ್ವಿತೀಯ ಸಂಪರ್ಕ ಹೊಂದಿದ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ ರಜಪೂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
Be the first to comment