ಜೀಲ್ಲಾ ಸುದ್ದಿಗಳು
ಬೀದರ (ಅಂಬಿಗ ನ್ಯೂಸ್ ): ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಕಳಪೆ ಮಟ್ಟದ ಪರಿಕರಗಳು ಮಾರಾಟ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿದ್ಯಾನಂದ ಸಿ ಅವರು ಹೇಳಿದರು.
2020-21ನೇ ಸಾಲಿನ ಪೂರ್ವ ಮುಂಗಾರು ಸಿದ್ಧತೆ ಹಾಗೂ ಕೃಷಿ ಪರಿಕರಗಳ ದಾಸ್ತಾನು ಕುರಿತು ಏ.24ರಂದು ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆಯ ಸಭಾಂಗಣದಲ್ಲಿ ಬೀದರ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ/ರಸಗೊಬ್ಬರ ಹಾಗೂ ಕೀಟನಾಶಕಗಳು ದೊರಕಿಸಿಕೊಡಲಾಗುವುದು. ಪ್ಯಾಕ್ ಮಾಡಲಾದ ಹಾಗೂ ಪ್ರಮಾಣಿಕೃತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು. ರೈತರಿಗೆ ಪರಿಕರ ವಿತರಿಸುವ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಧರಿಸಬೇಕು ಎಂದು ಅವರು ತಿಳಿಸಿದರು. ಯಾವ ಬಗೆಯ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬಾರದು ಎಂದು ಇದೆ ವೇಳೆಯಲ್ಲಿ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕರಾದ ಸೋಮಶೇಖರ ಬಿರಾದಾರ ಅವರು ಮಾತನಾಡಿ, ಕೃಷಿ ಇಲಾಖೆಯಿಂದ ಎಲ್ಲಾ ಪರಿಕರ ಮಾರಾಟಗಾರರಿಗೆ ಪಾಸ್ ವಿತರಿಸುತ್ತಿದ್ದು, ಸದರಿ ಪಾಸ್ ಪಡೆದುಕೊಂಡು ಮಳಿಗೆಗಳನ್ನು ತೆರೆದು ರೈತರಿಗೆ ಬೀಜ/ಗೊಬ್ಬರ/ಕೀಟನಾಶಕಗಳನ್ನು ನೀಡಬೇಕೆಂದು ತಿಳಿಸಿದರು.
ಬೀದರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ.ಅನ್ಸಾರಿ ಎಂ.ಎ.ಕೆ. ಅವರು ಮಾತನಾಡಿ, ಪರವಾನಿಗೆಗಳನ್ನು ಸಕಾಲದಲ್ಲಿ ನವೀಕರಿಸಕೊಳ್ಳಬೇಕು ಹಾಗೂ ದೇಸಿ ತರಬೇತಿ ಯಾರು ಪೂರ್ಣಗೊಳಿಸಿಲ್ಲ ಅವರು ಕೂಡಲೇ ಡಿಡಿ ತುಂಬಿ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರು.
ಜಾರಿದಳ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ.ಮಾರ್ಥಂಡ ಮಚಕುರಿ ಅವರು ಮಾತನಾಡಿ, ಎಲ್ಲಾ ಮಳಿಗೆಗಳಲ್ಲಿ ಪರವಾನಿಗಿ ದರ ಪಟ್ಟಿ ಹಾಗೂ ಅಂಗಡಿ ಹೆಸರುಗಳು ಪ್ರದರ್ಶಿಸಬೇಕು. ಪ್ರಮಾಣಿಕೃತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು. ಹೆಚ್ಚಿನ ದರಗಳಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿದ್ದಲ್ಲಿ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಲ್ಲಾ ಪರಿಕರ ಮಾರಾಟಗಾರರಿಗೆ ತಿಳಿಸಿದರು. ಸಭೆಯಲ್ಲಿ ಬೀದರ ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಇದ್ದರು.
Be the first to comment