ಮುದ್ದೇಬಿಹಾಳದಲ್ಲಿ ಕಾರ್ಯನಿರತ ಪತ್ರಕರ್ತರಿಂದ ತೋಳಿಗೆ ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ.

ಜೀಲ್ಲಾ ಸುದ್ದಿಗಳು

ಮುದ್ದೇಬಿಹಾಳ: ಮಂಡ್ಯದಲ್ಲಿ ಕೋವಿಡ್ 19 ವೈರಸ್ ಸೋಂಕು ತಪಾಸಣೆಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ತೆರಳಿದ್ದ ಪತ್ರಕರ್ತರ ಮೇಲೆ ಅಲ್ಲಿನ ಎಂಎಲ್ಸಿ ಶ್ರೀಕಂಠೇಗೌಡ, ಅವರ ಮಗ ಕೃಷಿಕ್ ಗೌಡ ನಡೆಸಿದ ಹಲ್ಲೆ ಘಟನೆ ಖಂಡಿಸಿ ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಘಟನೆ ಖಂಡಿಸಿ ಸಂಘದ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ವಡವಡಗಿ, ತಾಲೂಕು ಅಧ್ಯಕ್ಷ ಅಮೀನಸಾ ಮುಲ್ಲಾ ಮಾತನಾಡಿ ಘಟನೆಯನ್ನು ಖಂಡಿಸಿದರು. ಶಾಸಕ ಮತ್ತವರ ಪುತ್ರನ ವಿರುದ್ದ ಕೋವಿಡ್ ಸುಗ್ರಿವಾಜ್ಞೆ ಪ್ರಕಾರ ಕಠಿಣ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಸಂಘದ ಉಪಾಧ್ಯಕ್ಷರಾದ ಗುರುನಾಥ ಕತ್ತಿ, ಪ್ರಧಾನ ಕಾರ್ಯದರ್ಶಿ ಸಿದ್ದು ಚಲವಾದಿ, ಖಜಾಂಚಿ ಪರಶುರಾಮ ಕೊಣ್ಣೂರ, ಕಾರ್ಯದರ್ಶಿಗಳಾದ ಲಾಡ್ಲೇಮಶ್ಯಾಕ ನದಾಫ, ಸಾಗರ ಉಕ್ಕಲಿ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಮುತ್ತು ವಡವಡಗಿ, ಶಿವಕುಮಾರ ಶಾರದಳ್ಳಿ, ಉಮರಶರೀಫ, ರಾಮು ತಂಬೂರಿ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*