ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಡೇಕೊಳ ಅರಣ್ಯಪ್ರದೇಶದಲ್ಲಿ ಜರುಗಿರುವ,ದಲಿತ ಮುಖಂಡ ಸಾಲುಮನಿ ಶಿವಣ್ಣರನ್ನು ಹತ್ತ್ಯೆಗೈದ ಅಪರಾಧಿಗಳ ಆಸ್ಥಿಗಳನ್ನ ಸಕಾ೯ರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ದಲಿತ ಮುಖಂಡ ಸಾಲುಮನಿಶಿವಣ್ಣನವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸಕಾ೯ರ ನೀಡಬೇಕು ಎಂದು ಕನಾ೯ಟಕ ಮಾದಗ ದಂಡೋರ ಹೋರಾಟ ಸಮಿತಿ ಸಕಾ೯ರಕ್ಕೆ ಈ ಮೂಲಕ ಒತ್ತಾಯಿಸಿದೆ.ಸಾಲುಮನಿ ಶಿವಣ್ಣನವರ ಹತ್ತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರವೇ ಪರಿಹಾರವನ್ನು ಕೊಡಬೇಕು. ಈ ಮೂಲಕ ಶಿವಣ್ಣನವರ ಮಡದಿಯವರು ಕುಟುಂಬ ನಿವ೯ಣೆಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು,ಕರ್ನಾಟ ಮಾದಿಗ ದಂಡೋರ ಹೋರಾಟ ಸಮಿತಿ ಸಕಾ೯ರಕ್ಕೆ ಈ ಮೂಲಕ ಮನವಿ ಮಾಡಿದೆ.
*ಆರೋಪಿಗಳನ್ನು ಬಂಧಿಸಿದ ಪೊಲೀಸರು-* ದಲಿತ ಮುಖಂಡ ಸಾಲುಮನಿ ಶಿವಣ್ಣನವರ ಹತ್ತ್ಯೆಯ ಆರೋಪಿಗಳಾದ ಕಡೆಕೊಳ ಸಿದ್ದೇಶ,ಶಿವಣ್ಣ,ಕಂಚೋಬನಳ್ಳಿ ಬಸವರಾಜ ಎಂಬುವವರನ್ನು ಬಂಧಿಸಲಾಗಿದೆ.ಅಪರಾಧಿಗಳ ಪತ್ತೆ ಕಾಯ೯ಚರಣೆ,ಬಳ್ಳಾರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬರವರ ಮಾಗ೯ದಶ೯ನದಲ್ಲಿ ಕೂಡ್ಲಿಗಿ ಡಿವೈ ಎಸ್ಪಿ ಶಿವಕುಮಾರ ರವರ ನೇತೃತ್ವದಲ್ಲಿ ಪೊಲೀಸರು ಅಪರಾಧಿಗಳ ಪತ್ತೆ ಕಾಯ೯ಚರಣೆ ನಡೆಸಿದ್ದಾರೆ. ಕೊಟ್ಟೂರು ಸಿಪಿಐ ರವೀಂದ್ರ ಕುರುಬಗಟ್ಟಿರವರು ಖಾನಾಹೊಸಹಳ್ಳಿ ಪಿಎಸ್ಐ ನಾಗರಜರವರು ಹಾಗೂ ಕೊಟ್ಟೂರು ಪಿಎಸ್ಐ ಕಾಳಿಂಗಪ್ಪರವರ ಸಹಯೋಗದೊಂದಿಗೆ ಕಾಯ೯ಚರಣೆಯಲ್ಲಿ ತೊಡಗಿಸಿಕೊಂಡಿದ್ದರೆಂದು ತಿಳಿದುಬಂದಿದೆ.ಕೊಟ್ಟೂರು ಮತ್ತು ಖಾನಾಹೊಸಹಳ್ಳಿ ಪೊಲೀಸ್ ಕೆಲ ಸಿಬ್ಬಂದಿಯವರು ಪತ್ತೆ ಕಾಯ೯ಚರಣೆಯಲ್ಲಿ ಭಾಗಿಯಾಗಿದ್ದು,ಪೊಲೀಸರು ಬೀಸಿದ್ದ ಬಲೆಯಲ್ಲಿ ಅಪರಾಧಿಗಳು ಧಮ೯ಸ್ಥಳದ ಅರಣ್ಯಪ್ರದೇಶದ ಹತ್ತಿರ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಅಪರಾಧಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಹಂತದಲ್ಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
*ಶ್ಲಾಘನೆ-* ಪೊಲೀಸರು ತಮ್ಮ ಮಿಂಚಿನ ಕಾಯ೯ಚರಣೆಯಲ್ಲಿ ಯಶಸ್ಸು ಕಂಡಿದ್ದಾರೆ.ಪೊಲೀಸರ ಪ್ರಾಮಾಣಿಕತೆ ಹಾಗೂ ಕಥ೯ವ್ಯ ನಿಷ್ಠೆಗೆ ತಾವು ಕೂಡ್ಲಿಗಿ ಡಿವೈ ಎಸ್ಪಿ ಹಾಗೂ ಸಿಪಿಐ,ಪಿಎಸ್ಐ ಹಾಗೂ ಅವರ ಸಿಬ್ಬಂದಿಯವರನ್ನು ಅಭಿನಂಧಿಸುತ್ತಿರುವುದಾಗಿ, ಕನಾ೯ಟಕ ದಲಿತ ಸಂಘಷ೯ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಸಿದ್ದಾಪುರ ಈಶ್ವರಪ್ಪ ತಿಳಿಸಿದ್ದಾರೆ. ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ,ಅಪರಾದಿಗಳಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಅಗಲಿರುವ ಶಿವಣ್ಣನವರ ಕುಟುಂಬಕ್ಕೆ ಅಗತ್ಯ ನೆರವನ್ನು ಸಕಾ೯ರ ನೀಡಬೇಕೆಂದು ಈಶ್ವ ಪ್ಪನವರು ಈ ಮೂಲಕ ಸಕಾ೯ರಕ್ಕೆ ಮನವಿ ಮಾಡಿದ್ದಾರೆ.
Be the first to comment