ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರವರ ಕಚೇರಿಯಲ್ಲಿ,ಜಗಜ್ಯೋತಿ ಶ್ರೀಬಸವಣ್ಣನವರ ಜಯಂತಿ ಆಚರಿಸಲಾಯಿತು.ಪ್ರಭಾರ ತಹಶಿಲ್ದಾರರಾದ ಶ್ರೀಮತಿ ಅರುಂಧತಿ ನಾಗವಿರವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜಿಸಿ ಮಾತನಾಡಿದರು. ಬಸವಣ್ಣನವರ ವಚನಗಳು ಸವ೯ರಿಗೂ ಸವ೯ಕಾಲಕ್ಕೂ ಜ್ಞಾನ ಜ್ಯೋತಿಯಾಗಿವೆ.ಅವು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ,ವಚನದ ಅಂಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ತಾಪಂ ಕಾಯ೯ನಿವ೯ಹಣಾಧಿಕಾರಿ ಜಿ.ಎಂ.ಬಸಣ್ಣ.ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಹಾಗೂ ಶುಕೂರ್,ತಾಲೂಕು ಕಚೇರಿ ಸಿಬ್ಬಂದಿ ಮಂಜುನಾಥ,ವಾಸುದೇವ, ಬ್ಯಾಳಿ ವಿಜಯಕುಮಾರಗೌಡ, ಕೋಗಳಿ ಮಂಜುನಾಥ,ಕೋರಿ ಬಸವರಾಜ,ತೊಣಸಿಗೇರಿ ಜಿ.ಮಲ್ಲಿಕಾಜು೯ನ,ಕೆ.ನಾಗರಾಜ,ಮಾದಳ್ಳಿ ನಜೀರ್ ಸಾಬ್,ಶ್ರೀಮತಿ ಜಿಂಕಾಲ್ ನಾಗಮಣಿ,ಕೆ.ಎಂ.ವೀರೇಶ,ಇತರರು ಉಪಸ್ಥಿತರಿದ್ದರು.
Be the first to comment