ಜೀಲ್ಲಾ ಸುದ್ದಿಗಳು
ಹರಿಹರ:-ಕರೊನಾ ವೈರಸ್ ಹರಡುವಿಕೆಯಿಂದ ಹಾಗೂ ದೇಶದಲ್ಲಿ ಈ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ದೇಶದ ಜನ ಲಾಕ್ ಡೌನ್ನಿಂದ ಅನ್ನವಿಲ್ಲದೆ ಯಾರೂ ಸಾಯಬಾರದು ಎಂಬ ಉದ್ದೇಶದಿಂದ ಜನಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಅವರ ಹೊಟ್ಟೆ ತುಂಬಿಸುವ ಕಾಯಕವನ್ನು ಮಾಡುತ್ತಿದೆ .
ಸರ್ಕಾರದ ಜೊತೆ ಅನೇಕ ಸಂಘ ಸಂಸ್ಥೆಯವರು, ಸಮಾಜ ಸೇವಕರು, ದಾನಿಗಳು ,ಕೈಜೋಡಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ .
ದಾವಣಗೆರೆ ಜಿಲ್ಲೆಯ, ಹರಿಹರ ತಾಲ್ಲೂಕಿನ, ತಪೋವನದ ಮಾಣಿಕ್ಯ ಶಶಿಕುಮಾರ್ ಇವರು ತಾಲ್ಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಹಾರದ ಕಿಟ್ ನೀಡಿ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮುಖ್ಯ, ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಭಾರತದ ಸಂಸ್ಕೃತಿ ,ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಜನ ಸಾಮಾನ್ಯರಲ್ಲಿ ಧೈರ್ಯ ತುಂಬುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ .
ಶಶಿಕುಮಾರ್ ಅವರು ಈ ಹಿಂದಿನಿಂದಲೂ ಸಂಕಷ್ಟದಲ್ಲಿ ಸಿಲುಕಿದ್ದ ಜನರ ಸಹಾಯಕ್ಕೆ ನೆರವಾಗುತ್ತಿದ್ದಾರೆ .ಅವರ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.ನಿನ್ನೆಯೂ ಸಹ ಹರಿಹರದ ದೊಡ್ಡ ಬೀದಿಯಲ್ಲಿ ಇರುವ ಜನರಿಗೆ ಆಹಾರದ ಕಿಟ್ಟನ್ನು ನೀಡಿ ಜನಸಾಮಾನ್ಯರಿಗೆ ದ್ಯೆರ್ಯಾ ತುಂಬುವ ಕೆಲಸವನ್ನು ಮಾಡಿದರು, ಇವರೊಂದಿಗೆ ಹರಿಹರ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆ.ಬಿ ಇವರು ತಪೋವನದ ಪರವಾಗಿ ಜನರಿಗೆ ಆಹಾರದ ಕಿಟ್ಟನ್ನು ನೀಡಿದರು .
ತಪೋವನದ ಮಾಣಿಕ್ಯ ,ಶಶಿಕುಮಾರ್ ಇವರ ಸಮಾಜ ಸೇವೆ ಹೀಗೆ ನಿರಂತರವಾಗಿ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಇದ್ದೇವೆ ಎಂಬ ಧೈರ್ಯ ತುಂಬುವ ಕೆಲಸ ಸಾಗುತ್ತಿರಲಿ.
Be the first to comment