ಜಿಲ್ಲಾ ಉಸ್ತುವಾರಿ ಸಚಿವರಿಂದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ ಏಪ್ರಿಲ್ 26 (ಅಂಬಿಗ ನ್ಯೂಸ್ ): ಬಸವ ಜಯಂತಿ ಪ್ರಯುಕ್ತ ಪಶು ಸಂಗೋಪಣೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏ.26ರಂದು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀಬಸವೇಶ್ವರ ಅವರ ಪುತ್ಥಳಿಗೆ ಮಾಲಾರ್ಪಣೆ, ಮಹಾತ್ಮ ಬಸವೇಶ್ವರರಿಗೆ ನಮಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸಂಸದರಾದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಹೀಂ ಖಾನ್ ಅವರು ಕೂಡ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

*ಜನತೆಗೆ ಶುಭಾಶಯಗಳು:*

ಕೋವಿಡ್-19 ಕರೋನಾ ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಸಮಸ್ತ ಜಿಲ್ಲೆಯ ಮತ್ತು ನಾಡಿನ ಜನತೆಗೆ ಬಸವ ಜಯಂತಿಗಳ ಶುಭಾಶಯಗಳನ್ನು ತಿಳಿಸುತ್ತೇವೆ. ಇಂತಹ ವಿಷಮ ಪರಿಸ್ಥಿತಿಯಿಂದ ಪಾರಾಗಿ ಮಾನವಕುಲಕ್ಕೆ ಒಳಿತಾಗಲಿ ಎಂದು ತಾವುಗಳು ವಿಶ್ವಗುರು ಬಸವೇಶ್ವರರಲ್ಲಿ ಪ್ರಾರ್ಥಿಸಿದ್ದಾಗಿ ಸಚಿವರಾದ ಪ್ರಭು ಚವ್ಹಾಣ್ ಮತ್ತು ಸಂಸದರಾದ ಭಗವಂತ ಖೂಬಾ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣತಾಯಿ, ಎಂಎಸ್‌ಐಎಲ್‌ನ ನಿರ್ದೇಶಕರಾದ ಬಾಬು ವಾಲಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಣ
ಬುಳ್ಳಾ, ಜಿಪಂ ಸದಸ್ಯರಾದ ಶಕುಂತಲಾ ಬೆಲ್ದಾರ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್, ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಬಸವಾನುಯಾಯಿಗಳಾದ ಶಿವಶರಣಪ್ಪ ವಾಲಿ, ಬಾಬು ವಾಲಿ, ಗುರುನಾಥ ಕೊಳ್ಳೂರ, ಸುರೇಶ ಚೆನ್ನಶೆಟ್ಟಿ, ಮಾರುತಿ ಬೌದ್ದೆ, ಅನೀಲ್ ಬೆಲ್ದಾರ, ವಿಜಯಕುಮಾರ ಸೋನಾರೆ ಹಾಗೂ ಇತರರು ಇದ್ದರು.


*ಸಾಮಾಜಿಕ ಅಂತರ ಪಾಲನೆ:*

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಬೀದರ ನಗರದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಿ, ಅರ್ಥಪೂರ್ಣವಾಗಿ ಬಸವೇಶ್ವರರ ಜಯಂತಿ ಆಚರಿಸಲಾಯಿತು.

Be the first to comment

Leave a Reply

Your email address will not be published.


*