ದಲಿತ ಮುಖಂಡ ಸಾಲುಮನಿಶಿವಣ್ಣ ಹತ್ಯೆ!?-ಅಪರಾಧಿಗಳ ಆಸ್ಥಿ ಮುಟ್ಟುಗೋಲಿಗೆ ಒತ್ತಾಯ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಡೇಕೊಳ ಅರಣ್ಯಪ್ರದೇಶದಲ್ಲಿ ಜರುಗಿರುವ,ದಲಿತ ಮುಖಂಡ ಸಾಲುಮನಿ ಶಿವಣ್ಣರ ಅಸಹಜ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಹಾಗೂ ಅವರ ಆಸ್ಥಿಗಳನ್ನ ಸಕಾ೯ರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು, ಶಿವಣ್ಣನವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸಕಾ೯ರ ನೀಡಬೇಕು ಎಂದು ಕನಾ೯ಟಕ ಮಾದಗದಂಡೋರ ಹೋರಾಟ ಸಮಿತಿ ಸಕಾ೯ರಕ್ಕೆ ಒತ್ತಾಯಿಸಿದೆ.ಸಾಲುಮನಿ ಶಿವಣ್ಣನವರ ಹತ್ಯೆ ಯಾರೇ ಮಾಡಿರಲಿ,ಅವರಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರವೇ ಪರಿಹಾರವನ್ನು ಕೊಡಬೇಕು. ಈ ಮೂಲಕ ಶಿವಣ್ಣನವರ ಮಡದಿಯವರು ಕುಟುಂಬ ನಿವ೯ಣೆಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು,ಕರ್ನಾಟ ಮಾದಿಗ ದಂಡೋರ ಹೋರಾಟ ಸಮಿತಿ ಸಕಾ೯ರಕ್ಕೆ ಈ ಮೂಲಕ ಮನವಿ ಮಾಡಿದೆ.

*ಆರೋಪಿಗಳನ್ನು ಬಂಧಿಸಿದ ಪೊಲೀಸರು-* ದಲಿತ ಮುಖಂಡ ಸ‍ಾಲುಮನಿ ಶಿವಣ್ಣನವರನ್ನು ಹತ್ಯೆ ಮಾಡಿದ್ದಾರೆನ್ನಲಾಗುತ್ತಿರುವ ಆರೋಪಿಗಳನ್ನು,ಹೊಸಹಳ್ಳಿ ಪೊಲೀಸ್ ರು ಧಮ೯ಸ್ಥಳದ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆಂದು,ಬಲ್ಲ ಮೂಲಗಳಿಂದ ತಮಗೆ ಖಚಿತವಾಗಿದೆ.ಅವರ ಈ ಯಶಸ್ಸಿಗೆ ಮತ್ತು ಪ್ರಾಮಾಣಿಕತೆಗೆ ತಾವು ಹೊಸಹಳ್ಳಿ ಪೊಲೀಸ್ ರನ್ನು ಅಭಿನಂಧಿಸುತ್ತಿರುವುದಾಗಿ ಕನಾ೯ಟಕ ದಲಿತ ಸಂಘಷ೯ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಸಿದ್ದಾಪುರ ಈಶ್ವರಪ್ಪ ತಿಳಿಸಿದ್ದಾರೆ. ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ ಕಾರಣರಾದ ಅಪರಾದಿಗಳಿಗೆ ತಕ್ಕ ಶಿಕ್ಷೆಗೊಳಪಡಿಸಬೇಕು ಮತ್ತು ಶಿವಣ್ಣನವರ ಕುಟುಂಬಕ್ಕೆ ಅಗತ್ಯ ನೆರವನ್ನು ಸಕಾ೯ರ ನೀಡಬೇಕೆಂದು ಅವರು ಈ ಮೂಲಕ ಸಕಾ೯ರಕ್ಕೆ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*