ಜೀಲ್ಲಾ ಸುದ್ದಿಗಳು
ಕರ್ನಾಟಕ ರತ್ನ, ವರನಟ ಡಾ.ರಾಜಕುಮಾರ ಅವರ ೯೧ನೇ ಜಯಂತಿಯನ್ನು ವಿಶ್ವಕನ್ನಡ ರಕ್ಷಕ ದಳದ ರಾಜ್ಯಕೇಂದ್ರ ಕಛೇರಿಯಾದ ಸೋಲಾಪುರ ಗ್ರಾಮದ ಡಾ.ರಾಜಕುಮಾರ ವೃತ್ತದಲ್ಲಿ ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ವಿಶ್ವಕನ್ನಡ ರಕ್ಷಕ ದಳದ ರಾಜ್ಯಾಧ್ಯಕ್ಷ ಕುಮಾರ ತಳವಾರ ವಿಡಿಯೋ ಕಾಲ್ ಮುಖಾಂತರ ಡಾ.ರಾಜ್ ಕುಮಾರ ಅವರ ವ್ಯಕ್ತಿತ್ವದ ಕುರಿತು ಮಾತನಾಡಿದರಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾಹಿನ ನಾಯಿಕವಾಡಿ, ವಿಶ್ವಕನ್ನಡ ರಕ್ಷಕ ದಳದ ಕಾರ್ಯಕರ್ತರಾದ ಶಿವರಾಜ ಕುಡಬಾಳೆ, ಧೊಂಡಿಬಾ ಸುತಾರ, ಶಿವರಾಜ ನಾಯಿಕ, ಸೋಮನಾಥ ಕೊರವಿ, ಬಾಳಪ್ಪಾ ಕುರಾಡೆ, ಆಸೀಫ್ ಸುತಾರ, ವೈಭವ ಮಾಳಿ, ಮನೋಹರ ಕೊರವಿ, ನಾಗೇಶ ಬಂತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :Kallappa pamnaik
Be the first to comment