ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ-ಮಾಕನಡಕು ಗ್ರಾಪಂನಲ್ಲಿ ಜರುಗಿರುವ ಅಗರಣಗಳಲ್ಲಿ ಭಾಗಿಯಾಗಿರುವ ಬ್ರಷ್ಠಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಿ,ಬ್ರಷ್ಠ ಜನಪ್ರತಿನಿಧಿಗಳ ಆಸ್ಥಿ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಹಸಿರುಸೇನೆ ಸಕಾ೯ರಕ್ಕೆ ಒತ್ತಾಯಿಸಿದೆ.ಕನಾ೯ಟಕ ರಾಜ್ಯರೈತಸಂಘ ಹಸಿರು ಸೇನೆ(ಉಚ್ಚವನಳ್ಳಿ ಮಂಜುನಾಥ ಬಣ)ಜಿಲ್ಲಾಧ್ಯಕ್ಷ ಕೆ.ಕೆ.ಹಟ್ಟಿ ದೇವರಮನಿ ಮಹೇಶ ಮಾತನಾಡಿದರು. ರಾಷ್ಟ್ರೀಯ ಉಧ್ಯೋಗ ಖಾತರಿಯೋಜನೆಯಲ್ಲಿ ಭಾರೀ ಅವ್ಯವಹಾರಗಳು ಜರುಗಿವೆ ಎಂಬ ಆರೋಪ ಕೇಳಿಬಂದಿದೆ.ಮೊದಲು ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನ ಅಮಾನತ್ತಿನಲ್ಲಿಡಬೇಕಿದೆ.
ಆರೋಪಗಳ ಕುರಿತು ಶೀಘ್ರವೇ ತನಿಖೆಯಾಗಬೇಕು,ಶೀಘ್ರವೇಬ್ರಷ್ಠ ಜನಪ್ರತಿನಿಧಿಗಳ ಆಸ್ಥಿಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕಾನೂನು ರೀತ್ಯ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಒತ್ತಡಕ್ಕೋ ಅಥವಾ ಆಮೀಶಗಳಿಗೆ ಶಾಮೀಲಾಗಿ ನಿಲ೯ಕ್ಷಿಸಿದ್ದಲ್ಲಿ, ಕೊರೋನಾ ಲಾಕ್ ಡೌನ್ ಮುಗಿದ ಕೂಡಲೇ ಜಿಲ್ಲಾಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಕಲ್ಪನಾ ಹೇಮೇಶಗೌಡ,ಚಲುವಾದಿ ಸಂಘದ ಉಪಾಧ್ಯಕ್ಷ ಡಿ.ತಿಪ್ಪೇಸ್ವಾಮಿ,ಗ್ರಾಪಂ ಸದಸ್ಯ ಜಿ.ಓಬಣ್ಣ,ಅಗ್ರಹಾರ ಸಿದ್ದಪ್ಪ,ಮುಂತಾದವರು ಉಪಸ್ಥಿತರಿದ್ದರು.ಕೊರೋನಾ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
*ಅವ್ಯವಹಾರ ದೂರು:ತನಿಖಾತಂಡ ಬೆಟ್ಟಿ-* ಮಾಕನಡಕು ಗ್ರಾಪಂ ನಲ್ಲಿ ಕಳೆದ ಐದು ವಷ೯ಗಳ ಅವಧಿಯಲ್ಲಿ,ಭಾರೀ ಅವ್ಯವಹಾರ ಹಾಗೂ ಹಗರಣಗಳು ಜರುಗಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ. ಗ್ರಾಪಂ ಗೆ ಜಿಲ್ಲಾಪಂಚಾಯ್ತಿಯ ತನಿಖಾ ತಂಡ ಬೆಟ್ಟಿ ನೀಡಿ ತನಿಖೆ ಪ್ರಾರಂಭಿಸಿದೆ,ದೂರಿನಲ್ಲಿ ನಮೂದಿಸಿರುವ ಅಂಶಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ತೆರಳಿ ಪರಿಶೀಲಿಸಿ ತೆರಳದೆ.ಶೀಘ್ರವೇ ಮತ್ತೆ ಬೆಟ್ಟಿ ನೀಡಿ ತನಿಖೆ ಮುಂದುವರೆಸಲಾಗುವುದೆಂದು ತನಿಕಾ ತಂಡ ತಮಗೆ ತಿಳಿಸಿದ್ದಾರೆಂದು ಅವ್ಯವಹಾರಗಳ ಕುರಿತ ದೂರುದಾರರು ತಿಳಿಸಿದ್ದಾರೆ.
Be the first to comment