ಕೋಳಿಹಾಳ ನಡುವಿನ ತಾಂಡಾದಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ :ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ವರದಿ:- ಆನಂದ ಹೊಸಗೌಡರ ಹುಣಸಗಿ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಹುಣಸಗಿ:-ಇಡೀ ದೇಶಾದ್ಯಂತ ಮಹಾಮಾರಿ ಕಿಲ್ಲರ್ ಕೊರೊನಾ ವೈರಸ್ ನಿಂದಾಗಿ ಹೊರಡಿಸಲಾಗಿರುವ ಲಾಕ್ ಡೌನ್ ಆದೇಶವನ್ನು ಹೊರಡಿಸಲಾಗಿದೆ ಸಧ್ಯ ದೇಶದ ಪರೀಸ್ಥಿತಿ ಹೀಗಿರುವಾಗ ಇಲ್ಲೊಂದು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಹೌದು ಅದು ಯಾವ ಗ್ರಾಮದ ಸ್ಥಿತಿ ಅಂತೀರಾ ಕರ್ನಾಟಕದ ಗ್ರೀನ್ ಝೋನ್ ಪ್ರದೇಶವಾದ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲ್ಲೂಕಿನ ಕೋಳಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋಳಿಹಾಳ ನಡುವಿನ ತಾಂಡಾದ ಕುಡಿಯುವ ನೀರಿನ ಸಮಸ್ಯೆ ಇದು ಇಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು ಇಲ್ಲಿನ ಜನರು ಹನಿ ನೀರಿಗಾಗಿ ಪರದಾಡುವಂತಹ ಪರೀಸ್ಥಿತಿ ಬಂದೊದಗಿದೆ, ಇತ್ತ ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ವರ್ತನೆಯಿಂದ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮಾತ್ರ ಹಣ ಹೆಂಡದ ಹೊಳೆ ಹರಿಸುವ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೇ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಂಡಾದ ಜನರು ಈ ಮುಂಚೆಯೇ ಸಮಸ್ಯೆಯ ಬಗ್ಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಮಾತು.

ಈ ಮೂಲಕ ಮೇಲಧಿಕಾರಿಗಳೇ ದಯವಿಟ್ಟು ನಮ್ಮ ತಾಂಡಾದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲಿಕ್ಕೆ ನೀರಿನ ವ್ಯವಸ್ಥೆ ಮಾಡಿ ಕೊಡಿ ಇಲ್ಲದಿದ್ದರೇ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಈ ಮೂಲಕ ಮೇಲಾಧಿಕಾರಿಗಳಿಗೆ ತಾಂಡಾ ದ ಜನತೆ ಮನವಿ ಮಾಡಿದ್ದಾರೆ .

ಇನ್ನಾದರೂ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಈ ಕಡೆಗೆ ಗಮನ ಹರಿಸುವ ಮೂಲಕ ಈ ಗ್ರಾಮದಲ್ಲಿ ಉಲ್ಬಣಗೊಂಡಿರುವ ಕುಡಿಯುವ ಸಮಸ್ಯೆಗೆ ನಾಂದಿ ಹಾಡುವರೇ ಎಂದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*