ಜಿಲ್ಲಾ ಸುದ್ದಿಗಳು
ನಾಲತವಾಡ:
‘ಕೊರೊನಾ ಭೀತಿಯಲ್ಲಿ ಮನೆಯಲ್ಲಿಯೇ ಇರಬೇಕು ಮನೆ ಬಿಟ್ಟು ಹೊರಗೆ ಬರಬಾರದು ಎಂದು ಹೇಳುತ್ತಿದ್ದಾರೆ. ಆದರೆ ಸಾಬೇಹರೆ ಎಷ್ಟು ದಿನಾ ಅಂತಾ ಪಟ್ಟಣ ಪಂಚಾಯತಿಗೆ ಗಿರುಗಾಡಬೇಕು. ಒಂದು ಚರಂಡಿ ಸ್ವಚ್ಚ ಮಾಡ್ರಿ ಅಂತ ಅಂದ್ರ್ ಯಾವ ಅಧಿಕಾರಿನೂ ಕ್ಯಾರೆ ಎನ್ನುತ್ತಿಲ್ಲ. ಈಗಾಗಲೇ ಇದೇ ಹೊಲಸಿನಿಂದ ಹಿಂದೆ ಚಿಕನ್ ಗುನ್ಯಾ ಬಂದಿತ್ತು. ಮತ್ತ ಅದೇ ರೋಗ ಬರಬಾರದು ಅಂತ ನಾವೇ ಸ್ವಚ್ಚ ಮಾಡ್ತಿದ್ದೇವೆ.”
ಇದು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಗಚ್ಚನಭಾವಿ ಓಣಿಯ ನಿವಾಸಿಗರ ವ್ಯಥೆ. ಇಲ್ಲಿನ ಚರಂಡಿಯನ್ನು ಸ್ವಚ್ಚಗೊಳಿಸಿ ಎಂದು 10 ದಿನಗಳ ಹಿಂದೆಯೇ ಪಟ್ಟಣದ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸ್ಪಂದನೆ ನೀಡುತ್ತಿಲ್ಲ. ಇದರಿಂದ ಬೇಸತ್ತ ನಿವಾಸಿಗರು ಸ್ವತ ತಾವೇ ಚರಂಡಿಯನ್ನು ಸ್ವಚ್ಚಗೊಳಿಸಿದ್ದಾರೆ.
ಮುಖ್ಯಾಧಿಕಾರಿಗಳಿಗೆ ಹಿಡಿ ಶಾಪ:
ಚರಂಡಿಯನ್ನು ಸ್ವಚ್ಚಗೊಳಿಸದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಓಣಿಯ ನಿವಾಸಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಪಂಚಾಯತಿಗೆ ಬಂದಿರುವ ಮುಖ್ಯಾಧಿಕಾರಿಗಳಿಗೆ ಪಟ್ಟಣದ ಯಾವುದೇ ಸಮಸ್ಯೆಯೂ ತಿಳಿಯುತ್ತಿಲ್ಲ. ಜನರ ಸಮಸ್ಯೆಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಕೂಡಲೇ ಇಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎಂದು ನಿವಾಸಿಗರಾದ ನಿಂಗಣ್ಣ ವಾಲಿ, ಜಗದೀಶ ಹೊಸಮಠ, ಅಮರೇಶ ಹೊಸಮಠ ಇತರರು ಆಗ್ರಹಿಸಿದ್ದಾರೆ.
Be the first to comment