ಮಾಜಿ ಸಚಿವ ನಾಡಗೌಡ ಅವರಿಂದ ಮಾಸ್ಕ ವಿತರಣೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ:
ಕೊರೊನಾ ಹೆಮ್ಮಾರಿಯನ್ನು ತಡೆಗಟ್ಟಲು ತಮ್ಮ ಕುಟುಂಬ ಮತ್ತು ಪ್ರಾಣವನ್ನೆ ಲೆಕ್ಕಿಸದೇ ಜನರ ಆರೋಗ್ಯ ಕಾಪಾಡುವಲ್ಲಿ ಹಗಲಿರುವಳು ಸೇವೆ ಮಾಡುತ್ತಿರುವ ಆರೋಗ್ಯ ಇಲಾಖೆ, ಪೊಲೀಸ ಇಲಾಖೆ ಹಾಗೂ ಪೌರಕಾರ್ಮಿರಿಗೆ ಶನಿವಾರ ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾಸ್ಕ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದರು ಮಾಜಿ ಸಚಿವರು, ವಿಜಯಪುರ ಜಿಲ್ಲೆಯು ಮೊದಲಿಗಿಂತಲೂ ಹೆಚ್ಚು ಕೊರೊನಾ ಸೊಂಕಿತರನ್ನು ಹೊಂದಿದ್ದು ಇದು ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಈ ಸಂದರ್ಭದಲ್ಲೂ ಸಾರ್ವಜನಿಕರ ಹಿತಕ್ಕಾಗಿ ಬಿಸಿಲು ಎನ್ನದೇ ಕೊರೊನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಪುರಸಭೆ ಅಕಾರಿಗಳು ಹಾಗೂ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರೆಗೆ ಎಷ್ಟು ಧನ್ಯತೆಯನ್ನುಅರ್ಪಿಸಿದರೂ ಕಡಿಮೆ. ಕೆಲಕಡೆ ಇಂತಹ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಇವರ ಸೇವೆಗೆ ಸಾರ್ವಜನಿಕರೈ ಸಹಕಾರ ನೀಡಿದರೆ ಮಾತ್ರ ಅವರ ತ್ಯಾಗಕ್ಕೆ ಬೆಲೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ ಠಾಣೆಗೆ, ಆರೋಗ್ಯ ಇಲಾಖೆಗೆ ಹಾಗೂ ಪೌರಕಾರ್ಮಿಕರಿಗೆ ಮಾಸ್ಕ ವಿತರಿಸಲಾಯಿತು. ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಎಸ್.ಜಿ ಪಾಟೀಲ(ಶೃಂಗಾರಿಗೌಡ), ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ಪುರಸಭೆ ಸದಸ್ಯ ಮಹಿಬೂಬ ಗೂಳಸಂಗಿ, ರಿಯಾಜ ಢವಳಗಿ, ಯಲ್ಲಪ ನಾಯಕಮಕ್ಕಳ, ಅನಿಲ ನಾಯಕ, ಸಮೀರ ದ್ರಾಕ್ಷಿ, ಯುವ ಮುಖಂಡ ಚಿನ್ನು ನಾಡಗೌಡ, ಗೋಪಿ ಮಡಿವಾಳರ, ಕಾಮರಾಜ ಬಿರಾದಾರ, ಮಲ್ಲಿಕಾರ್ಜುನ ಬಾಗೇವಾಡಿ, ಪಿಂಟು ಸಾಲಿಮನಿ, ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ರಾಮು ಲಮಾಣಿ, ಕಾರ್ತಿಕ ನಾಡಗೌಡ, ನಾಗರಾಜ ತಂಗಡಗಿ, ಬಸವರಾಜ ಗೂನಾಳ, ಪ್ರಶಾಂತ ತಾರನಾಳ, ಮುತ್ತು ಬಿಳೇಭಾವಿ ಇದ್ದರು.


Be the first to comment

Leave a Reply

Your email address will not be published.


*