ಜೋಳದ ಬಣವಿಗೆ ಕಿಡಿಗೇಡಿಗಳಿಂದ ಬೆಂಕಿ: ಪೊಲೀಸ ಠಾಣೆಯಲ್ಲಿ ದೂರು ದಾಖಲು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ:
ತಾಲೂಕಿನ ನೇಬಗೇರಿ ಗ್ರಾಮದ ಮಂಜುನಾಥ ಬಿರಾದಾರ ಎಂಬ ರೈತನ ಹೊಲದಲ್ಲಿ ಇಡಲಾದ ಜೋಳದ ಬಣವಿಗೆ ಬೆಂಕಿ ತಗುಲಿದ್ದು ಅಂದಾಜು  ೫೦ ಸಾವಿರದಷ್ಟು ಮೇವು ಸಂಪೂರ್ಣವಾಗಿ ನಾಶವಾಗಿದೆ.
ಮುದ್ದೇಬಿಹಾಳದಿಂದ ತಂಗಡಿಗ ಗ್ರಾಮಕ್ಕೆ ತೆರಲುತ್ತಿದ್ದ ದ್ವಚಕ್ರ ವಾಹನಕಾರರು ಬನವಿಗೆ ಹತ್ತಿರುವ ಬೆಂಕಿಯನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ತಕ್ಷಣದಲ್ಲಿಯೇ ಗ್ರಾಮಸ್ಥರು ಹೊಲಕ್ಕೆ ತೆರಲಿ ಅಗ್ನಿಶಾಮಕದಳಕ್ಕೆ ತಿಳಿಸಿದ್ದು ಬೆಂಕಿ ನಿಂದಿಸುವಷ್ಟರಲ್ಲಯೇ ಬಣವಿಯು ಸಂಪೂರ್ಣವಾಗಿ ಸುಟ್ಟುಹೋಗಿದೆ.
ದೂರು ದಾಖಲು:
ಹೊಲದಲ್ಲಿ ಯಾವುದೇ ರೀತಿಯ ಬೆಂಕಿ ಅನಾಹುತವಾಗದಂತೆ ಎಚ್ಚರಿಕೆಯನ್ನು ಮಾಲಿಕ ಮಂಜುನಾಥ ಬಿರಾದಾರ ವಹಿಸಿದ್ದರೂ ಬಣವಿಗೆ ಬೆಂಕಿ ತಗುಲಿದ್ದು ಅನುಮಾನ ವ್ಯಕ್ತವಾಗಿದೆ. ಇದನ್ನು ಯಾರೊ ಕಿಡಿಗೇಡಿಗಳೇ ಬೆಂಕಿ ಹಚ್ಚಿರಬೇಕೆಂದು ಹೊಲದ ಮಾಲಿಕರು ತಿಳಿಸಿದ್ದು ಈ ಬಗ್ಗೆ ಮುದ್ದೇಹಾಳ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



 

Be the first to comment

Leave a Reply

Your email address will not be published.


*