ಶಾಸಕರ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ 65 ಲಕ್ಷ ರೂಪಾಯಿ ::ಬೀದರ ದಕ್ಷಿಣಕ್ಷೇತ್ರದ ಜನತೆಗೆ ಮಾಸ್ಕ್, ಸ್ಯಾನಿಟೈಜರ್ ಸೋಪ್

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ..ಏಪ್ರಿಲ್ 24 (ಅಂಬಿಗ ನ್ಯೂಸ್ ): ಕರೋನಾ ವೈರಾಣು ಬಾರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಜನರಿಗೆ ವಿಶೇಷವಾಗಿ ಎರಡು ಪದರಿನ ಮರುಬಳಕೆ ಮಾಡಬಹುದಾದ 2 ಲಕ್ಷ ಮಾಸ್ಕ್ ಹಾಗೂ 60 ಸಾವಿರ ಸ್ಯಾನಿಟೈಸರ್ ಸೋಪ್ ಅನ್ನು ವಿತರಿಸಲು ಶಾಸಕರಾದ ಬಂಡೆಪ್ಪ ಖಾಶೆಂಪುರ ಅವರು ಮುಂದಾಗಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಶಾಸಕರ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ 65 ಲಕ್ಷ ರೂಪಾಯಿಗಳನ್ನು ಬಳಸುವಂತೆ ಮತ್ತು ಈ ಎಲ್ಲ ಸಾಮಗ್ರಿಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಿಗೆ ವಿತರಿಸಲು ಕ್ರಮ ವಹಿಸಬೇಕು ಎಂದು ಶಾಸಕರಾದ ಖಾಶೆಂಪೂರ ಅವರು ಏ.24ರಂದು ಪತ್ರದ ಮುಖೇನ ಬೀದರ್ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರಿಗೆ ತಿಳಿಸಿದರು.
ಸಾರ್ವಜನಿಕರು ಮಾಸ್ಕಗಳು, ಸ್ಯಾನಿಟೈಜರ್ ಸೋಪಗಳನ್ನು ಸರಿಯಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರು, ಕೊರೊನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳಗೆ ಸ್ಪಂದಿಸಿ, ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ 65 ಲಕ್ಷ ರೂಪಾಯಿ ನೀಡಿರುವುದು ವಿಶೇಷವಾಗಿದೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Be the first to comment

Leave a Reply

Your email address will not be published.


*