ಜೀಲ್ಲಾ ಸುದ್ದಿಗಳು
ನಾಲತವಾಡ:ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಿದ್ದಾರೆ. ಆದರೆ ಇದಕ್ಕೆ ಆಲೂರು ಗ್ರಾಮದ ಕೆಲವು ಜನ ಡೋಂಟ್ ಕೇರ್ ಅಂದಿದ್ದಾರೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಹಣ ಪಡೆಯಲು ಮುಗಿಬಿದ್ದಿದ್ದಾರೆ. ಜನಧನ ಖಾತೆಗೆ ಸರ್ಕಾರ 500 ರೂ. ಜಮಾ ಮಾಡಿದ ಹಾಗೂ ತಮ್ಮ ಖಾತೆಯಲ್ಲಿರುವ ಹಣವನ್ನ ಪಡೆದುಕೊಳ್ಳಲು ಜನರು ಲಾಕ್ ಡೌನ್ ನಿಯಮವನ್ನ ಉಲ್ಲಂಘಿಸಿ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಜಾತ್ರೆಗೆ ಸೇರಿದಂತೆ ಜನ ನೆರೆದಿದ್ದರು.
ಆಲೂರು ಸುತ್ತಮುತ್ತಲಿನ ಗ್ರಾಮಗಳ ಜನರು ಬ್ಯಾಂಕ್ ಮುಂದೆ ಜಮಾಯಿಸಿದ್ದು, ಬ್ಯಾಂಕ್ ಬಾಗಿಲು ತೆರೆಯುವ ಮುನ್ನವೇ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ. ಏಕಾಏಕಿ ಸಾಕಷ್ಟು ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಜನರನ್ನ ನಿಯಂತ್ರಿಸಲು ಬ್ಯಾಂಕ ಸಿಬ್ಬಂದಿಗಳು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ನಿಯಮ ರೂಪಿಸಿದ ಮ್ಯಾನೇಜರ್:-
ಬ್ಯಾಂಕ ಮುಂದೆ ಜನರ ಗದ್ದಲ ಗಮನಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನ ವ್ಯವಸ್ಥಾಪಕರು ಬ್ಯಾಂಕಗೆ ಬಂದ ಎಲ್ಲ ಗ್ರಾಹಕರಿಗೆ ಟೋಕನ್ ನೀಡಿ ಬಾಗಿಲನ್ನು ಹಾಕಿ ಪ್ರತಿ ಬಾರಿ ಮೂವರಿಗೆ ಬ್ಯಾಂಕ್ ಪ್ರವೇಶಿಸಲು ಅನುವುಮಾಡಿಕೊಡುವ ಮೂಲಕ ಅಂತರ ಕಾಯ್ದುಕೊಳ್ಳುವ ಪಾಠಕ್ಕೆ ನಾಂದಿ ಹಾಡಿ ಎಲ್ಲ ಗ್ರಾಹಕರ ಮೆಚ್ಚುಗೆಗೆ ಪಾತ್ರರಾದರು.
Be the first to comment