ಜಿಲ್ಲೆಯಲ್ಲಿ ಲಾಕ್ ಡೌನ್ ಸಡಲಿಕೆಯಾದ ಹಿನ್ನೆಲೆ, ನಗರದತ್ತ ಧಾವಿಸುತ್ತಿರುವ ಹಳ್ಳಿಗರು.

ಜೀಲ್ಲಾ ಸುದ್ದಿಗಳು

ಜನರಿಗೆ ಸ್ವತಃ ಮಾಸ್ಕ್ ಹಾಕಿ ಪೊಲೀಸರ ಜಾಗೃತಿ

ಅಂಬಿಗ ನ್ಯೂಸ್ ಸುರಪುರ

ಯಾದಗಿರಿ: ಜಿಲ್ಲೆಯ ಸುರಪುರದ ವಿವಿಧ ಗ್ರಾಮಗಳ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿದ್ದ ರೈತರಿಗೆ, ಹಿರಿಯರನ್ನು ತಡೆದು, ಅವರಿಗೆ ಕೊರೊನಾ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಸ್ವತಃ ತಾವೇ ಮಾಸ್ಕ್ ಹಾಕಿ, ಮಾಸ್ಕ್ ನ ಮಹತ್ವವನ್ನು ಹಳ್ಳಿಗರಿಗೆ ತಿಳಿಸುವ ಕಾರ್ಯಕ್ಕೆ ಸುರಪುರ ಠಾಣೆಯ
ಪಿಎಸ್ ಐ ಚೇತನ್ ಕುಮಾರ್ ಬಿದರಿ ಮುಂದಾಗಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ.

 

ಇದರಿಂದ ಗಿರಿಜಿಲ್ಲೆ ಯಾದಗಿರಿ ಗ್ರೀನ್ ಜೋನ್ ನಲ್ಲಿದೆ, ಇದರಿಂದಾಗಿ ಜಿಲ್ಲಾಡಳಿತ ಸಹಜವಾಗಿಯೇ ಕೆಲವೊಂದು ಸಡಿಲಿಕೆ ಮಾಡಲಾಗಿದೆ.

ಇದರಿಂದಾಗಿ ಇಷ್ಟು ದಿನ ಮನೆಯಲ್ಲಿದ್ದ ಹಳ್ಳಿಗರು ವ್ಯಾಪಾರಕ್ಕಾಗಿ ನಗರದತ್ತ ಧಾವಿಸಿ ಬರುತ್ತಿದ್ದಾರೆ.

ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಠಿಕ್ಕಾಣಿ ಹಾಕಿರುವ ಸುರಪುರ PSI ಚೇತನ್ ಕುಮಾರ್ ಸಿಬ್ಬಂದಿಗಳ ಜೊತೆ ಸೇರಿ ಸುರಪುರ ನಗರಕ್ಕೆ ಬರುವ ರೈತರಿಗೆ, ಮಹಿಳೆಯರಿಗೆ, ಮತ್ತು ಹಿರಿಯರಿಗೆ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಈ ವೇಳೆ ಮಾಸ್ಕ್ ಇಲ್ಲದೆ ಸಂಚರಿಸಿ ಬರುವವರಿಗೆ ಸ್ವತಃ ತಾವೇ ಮಾಸ್ಕ್ ಕೊಟ್ಟು, ಅದರ ಬಳಕೆ ‌ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ನಗರದ ಪೊಲೀಸರ ಈ‌ ಅಮೋಘವಾದ ಕಾರ್ಯ ಶ್ಲಾಘನೀಯವಾಗಿದ್ದು ಪೊಲೀಸ್ ಇಲಾಖೆಯ ಸತ್ಕಾರ್ಯಕ್ಕೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Be the first to comment

Leave a Reply

Your email address will not be published.


*